ವಿಜಯಪುರ: ದಿ ಕಾಶ್ಮೀರಿ ಫೈಲ್ ಚಿತ್ರ ಒಂದು ವಾರದ ವರೆಗೆ ಜಿಲ್ಲೆಯ ಜನತೆ ನೋಡಲು ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ನಗರದ ಅಪ್ಸರಾ ಚಿತ್ರಮಂದಿರದಲ್ಲಿ ಮಾರ್ಚ್ 21ರಿಂದ ಪ್ರೇಕ್ಷಕರು ನೋಡಲು ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನ ಒಂದು ಶೋ ಟಿಕೆಟ್ ಹಣವನ್ನು ನಾನೇ ನೀಡುತ್ತೇನೆ. ಜನತೆ ಕಾಶ್ಮೀರ ಕುರಿತಾದ ಚಿತ್ರ ನೋಡಬೇಕು ಎಂದು ಶಾಸಕ ಯತ್ನಾಳ ಮನವಿ ಮಾಡಿದರು.