ವಿಜಯಪುರ: ಕಳೆದ ರಾತ್ರಿ ಸುರಿದ ಭಾರಿ ಮಳೆ ಗಾಳಿಗೆ ಮನೆಯ ಮೇಲ್ಛಾವಣಿ ಕುಸಿದಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಚಿಕ್ಕರೂಗಿ ಗ್ರಾಮದಲ್ಲಿ ನಡೆದಿದೆ.
ಬಸವರಾಜ್ ಸಿಂದಗಿ ಎಂಬುವವರ ಮನೆ ಕುಸಿತವಾಗಿದೆ. ಮನೆ ಮೇಲ್ಛಾವಣಿಯ ಕುಸಿಯುವ ವೇಳೆಯಲ್ಲಿ ಮನೆಯಿಂದ ಕುಟುಂಬಸ್ಥರು ಹೊರಗಡೆಗೆ ಬಂದಿದ್ದು, ಇದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ಅಲ್ಲದೇ, ಮೇಲ್ಛಾವಣಿ ಕುಸಿತದಿಂದ 3 ಲಕ್ಷಕ್ಕೂ ಅಧಿಕ ಹಾನಿಯಾಗಿದೆ. ಇನ್ನೂ ಮನೆಯಲ್ಲಿದ್ದ ವಸ್ತುಗಳು ಜಖಂಗೊಂಡಿವೆ.
ಅದಕ್ಕಾಗಿ ಪ್ರಕೃತಿ ವಿಕೋಪದಡಿ ಸರ್ಕಾರ ಪರಿಹಾರ ನೀಡಬೇಕು ಎಂದು ಅಕ್ಷಯ ಸಿಂದಗಿ ಮನವಿ ಮಾಡಿದರು. ದೇವರಹಿಪ್ಪರಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.