ವಿಜಯಪುರ: ವಿಜಯಪುರ ನಗರದಲ್ಲಿನ ಅಸಾರ್ ಮಹಲ್ನಲ್ಲಿ ವಿಜೃಂಭಣೆಯಿಂದ ಸಂದಲ ಕಾರ್ಯಕ್ರಮ ಜರುಗಿತು.
ಜಾತಿ ಭೇದವಿಲ್ಲದೆ, ಎಲ್ಲರೂ ಪಾಲಗೊಂಡು ಅಸಾರ ಶರೀಫ್ ಕೋಣೆಯ ಬೀಗ ತೆಗೆಯುವ ಮೂಲಕ ಗಂಧಕ್ಕೆ ಚಾಲನೆ ನೀಡಿದರು. ಸುಮಾರು 350 ವರ್ಷಗಳಿಂದ ಮುಶ್ರಿಫ್ ಕುಟುಂಬಸ್ಥರಿಂದ ನಡೆಯುತ್ತಾ ಬಂದಿದೆ. ಮುಖ್ಯಸ್ಥ ದಿವಂಗತ ಅಲ್ ಹಾಜ್ ಮೆಹಬೂಬ್ ಖಾದ್ರಿ ಮುಶ್ರೀಫ್ ನಿಧನ ಹಿನ್ನಲೆಯಲ್ಲಿ ಇಮತಿಯಾಜ್ ಖಾದ್ರಿ ಮುಶ್ರಿಫ್ ಹಾಗೂ ಅವರ ಕುಟುಂಬಸ್ಥರಿಂದ ಅಸಾರಾಂ ಶರೀಫ್ ಕೋಣೆಯ ಬಾಗಿಲ ಬಿಗ್ ತೆಗೆಯಲಾಯಿತು. ಕಾರ್ಯಕ್ರಮದಲ್ಲಿ ಇಮ್ತಿಯಾಜ್ ಖಾದ್ರಿ ಮುಶ್ರಿಫ್, ಇಸ್ಸಾ ಖಾದ್ರಿ ಮುಶ್ರಿಫ್, ಫಸ್ಟ್ ಮೇಯರ್ ಸಜ್ಜಾಜೆ ಪೀರಾಂ ಮುಶ್ರಿಫ್, ಸೈಯದ್ ಮುಶಾ ಖಾದ್ರಿ ಮುಶ್ರಿಫ್, ಸೈಯದ್ ಅಯಾಜ್ ಖಾದ್ರಿ ಮುಶ್ರಿಫ್, ಫಾರೂಕ್ ಮುಶ್ರಿಫ್ ಸೇರಿದಂತೆ ಮುಶ್ರಿಫ್ ಕುಟುಂಬಸ್ಥರು ಮತ್ತು ರಾಜಕೀಯ ಮುಖಂಡರು ಹಾಗೂ ಭಕ್ತರು ಮುಹೆ ಮುಬಾರಕ್ ದರ್ಶನ ಪಡೆದುಕೊಂಡರು.