ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಈಗಾಗಲೇ ರಾಜ್ಯ ಚುನಾವಣೆ ಆಯೋಗ ಮೂಹೂರ್ತ ನಿಗದಿ ಪಡಿಸಿದ್ದು ಇದೇ ಅಕ್ಟೋಬರ್ 10ರಂದು ಅಧಿಸೂಚನೆ ಹೊರಡಿಸಲಾಗುವದು. ಅ28ರಂದು 35ವಾರ್ಡ್ ಗಳಿಗೆ ನಿಗದಿ ಪಡಿಸಿದ ಮೀಸಲಾತಿ ಅನುಗುಣವಾಗಿ ಚುನಾವಣೆ ನಡೆಸಲಾಗುವದು ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಂಭಾಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡ ಅವರು, ನಾಮ ಪತ್ರ ಸಲ್ಲಿಸಲು ಅ.17ಕೊನೆ ದಿನವಾಗಿದೆ. ಅ.18ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅ.20ನಾಮಪತ್ರ ಹಿಂ ಪಡೆಯಲು ಅವಕಾಶವಿದೆ. ಅ.28ರಂದು 35ವಾರ್ಡ್ ಗಳಿಗೆ ಮತದಾನ ನಡೆಯಲಿದೆ. ಬೆಳಗ್ಗೆ 7ಗಂಟೆಯಿಂದ ಸಂಜೆ 5ಗಂಟೆಯವರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಮರುಮತದಾನ ಅವಶ್ಯವಿದ್ದಲ್ಲಿ ಅ.30ರಂದು ನಡೆಯಲಿದೆ. ಅ.31ರಂದು ನಗರದ ದರಬಾರ್ ಹೈಸ್ಕೂಲ್ ನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ನಾಮಪತ್ರಗಳನ್ನು ವಿಜಯಪುರ ಮಹಾನಗರ ಪಾಲಿಕೆ ಕಚೇರಿ ಸೇರಿ ಏಳು ಕಚೇರಿಗಳಲ್ಲಿ ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ವಾರ್ಡ್ ಮೀಸಲಾತಿ: ಒಟ್ಟು 35 ವಾರ್ಡ್ ಗಳನ್ನು ಹೊಂದಿರುವ ಮಹಾನಗರ ಪಾಲಿಕೆಯ ಮೀಸಲಾತಿಯಂತೆ 16ವಾರ್ಡ್ ಮಹಿಳಾ ಮೀಸಲಾತಿ, 19 ಸಾಮಾನ್ಯ ಮೀಸಲಾತಿ ಇದ್ದು ಇದರೊಳಗೆ ಪರಿಶಿಷ್ಟ ಜಾತಿ 5, ಪರಿಶಿಷ್ಟ ಪಂಗಡ 01, ಹಿಂದುಳಿದ ವರ್ಗ ಅ 09, ಹಿಂದುಳಿದ ವರ್ಗ ಬ 02 ಒಳಗೊಂಡಿದೆ ಎಂದು ತಿಳಿಸಿದರು.
ಜನಸಂಖ್ಯೆ ಮತ್ತು ಮತಗಟ್ಟೆ: ಒಟ್ಟು 303 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಒಟ್ಟು 294173 ಮತದಾರರು ಮತ್ತು ಹಕ್ಕು ಚಲಾಯಿಸಲಿದ್ದಾರೆ. ಇವರಲ್ಲಿ146736 ಪುರುಷರು, 147327 ಮಹಿಳೆಯರು ಹಾಗೂ 110 ಇತರೆ ಮತದಾರರು ಇದ್ದಾರೆ ಎಂದು ತಿಳಿಸಿದರು.
ಮಾದರಿ ನೀತಿ ಸಂಹಿತಿ: ಅ.10ರಿಂದ 31 ರವರೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತಿ ಜಾರಿಯಾಗಲಿದೆ. ಸೂಸುತ್ರ ಚುನಾವಣೆ ನಡೆಸಲು 1454 ಸಿಬ್ಬಂದಿಗಳನ್ನು ನೇಮಿಸಲಾಗಿದೆ ಕರ್ನಾಟಕಓನ್ನ್ಯೂಸ್ಗೆ ತಿಳಿಸಿದರು.