ವಿಜಯಪುರ: ಜಿಲ್ಲೆಯಲ್ಲ್ಲಿ ದಿನಾಂಕ : 04-04-2022 ರಂದು ಅಕಾಲಿಕವಾಗಿ ಮಳೆಯಾಗಿದ್ದು, ಕೆಲವು ತಾಲೂಕುಗಳಲ್ಲಿ ಹಾನಿಯುಂಟಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ತಿಳಿಸಿದ್ದಾರೆ.
ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಶ್ರೀ. ಹುಲಗಪ್ಪ ಸಾಬಣ್ಣ ಖಿಲಾರಹಟ್ಟಿ ಎಂಬುವರು ಸಿಡಿಲು ಶಾಕಕ್ಕೆ ಗಾಯಗೊಂಡಿರುತ್ತಾರೆ. ಸಿಡಿಲು ಬಿದ್ದು ಜಮೀನಿನಲ್ಲಿ ಶೇಖರಸಿಟ್ಟಿದ್ದ 2 ಟ್ರ್ಯಾಕ್ಟರ್ ಜೋಳದ ಕಣಕಿ ಸುಟ್ಟು ಹೋಗಿರುತ್ತದೆ.
ಅದರಂತೆ ಬ ಬಾಗೇವಾಡಿ ತಾಲೂಕಿನಲ್ಲಿ ಎಕರೆ 20 ಗುಂಟೆಯಲ್ಲಿ ಬೆಳೆದ ಬಾಳೆ ಗಿಡಗಳು ಹಾನಿಯಾಗಿರುತ್ತವೆ. ಆಲಮೇಲದಲ್ಲಿ ನಿಂಬೆಗಿಡಗಳು ಹಾನಿಯಾಗಿರುತ್ತವೆ. ಕೋಲ್ಹಾರದ ತೆಲಗಿ ಗ್ರಾಮದಲ್ಲಿ 03 ಕಚ್ಚಾ ಮನೆ ಹಾನಿಯಾಗಿರುತ್ತದೆ. ಕುರುಬರದಿನ್ನಿ ಗ್ರಾಮದಲ್ಲಿ 1.00 (ಎ-ಗು) ಎಲೆ ತೋಟದಲ್ಲಿ ಎಲೆ ಮರಗಳು ಬಿದ್ದು ಹಾನಿಯಾಗಿರುತ್ತವೆ. ತಡಲಗಿ ಗ್ರಾಮದಲ್ಲಿ 2.00 (ಎ-ಗು) ಎಲೆ ತೋಟದಲ್ಲಿ ಎಲೆ ಮರಗಳು ಬಿದ್ದು ಹಾನಿಯಾಗಿರುತ್ತವೆ.
ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದಲ್ಲಿ ಮನುಕ ಶೆಡ್ಡಿನ ಶಿಂಪುಲಿನ ಕಾಗದ ಶೆಡ್ಡಿನಲ್ಲಿರುವ ಒಣ ದ್ರಾಕ್ಷಿ ಹಾನಿಯಾಗಿರುತ್ತದೆ. ತಿಗಣಿಬಿದರಿ ಗ್ರಾಮದಲ್ಲಿ ಮನುಕ ಶೆಡ್ಡಿನ ಶಿಂಪುಲಿನ ಕಾಗದ ಶೆಡ್ಡಿನಲ್ಲಿರುವ ಒಣ ದ್ರಾಕ್ಷಿ ಹಾನಿಯಾಗಿರುತ್ತದೆ. ಬಬಲೇಶ್ವರ ಗ್ರಾಮದಲ್ಲಿ ಸ.ನಂ.180/5 ರಲ್ಲಿ 0.05 (ಎ-ಗು) ದ್ರಾಕ್ಷಿ ಹಾನಿಯಾಗಿರುತ್ತದೆ. ಬಬಲೇಶ್ವರ ಗ್ರಾಮದಲ್ಲಿ ಸ.ನಂ.113 ರಲ್ಲಿ 0.10 (ಎ-ಗು) ಬಾಳೆ ಬೆಳೆ ಹಾನಿಯಾಗಿರುತ್ತದೆ. ಬಬಲೇಶ್ವರ ಗ್ರಾಮದಲ್ಲಿ ಸ.ನಂ.175/3 ರಲ್ಲಿ 0.20 (ಎ-ಗು) ನುಗ್ಗೆ ಬೆಳೆ ಹಾನಿಯಾಗಿರುತ್ತದೆ. ಹಾಗೂ 0.10 (ಎ-ಗು) ಮಾವಿನ ಗಿಡಗಳ ಹಾನಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.