ವಿಜಯಪುರ: ಆ ಎಂಜಿನಿಯರ್ ಒಬ್ಬರಿಗೆ
ಬಿಟ್ಟು ಉಳಿದೆಲ್ಲ ಎಂಜಿನಿಯರ್ಗಳಿಗೆ ಎಂಜಿನಿಯರ್ಸ್ ದಿನದ ಶುಭಾಶಯಗಳ ಸಂದೇಶ ವಿಜಯಪುರ ಜಿಲ್ಲಾದ್ಯಂತ ಸಕತ್ ವೈರಲ್ ಆಗುತ್ತಿದೆ.
ನಗರದ ಇಬ್ರಾಹಿಮಪುರ ರೈಲ್ವೆ ಮೇಲ್ಸೇತುವೆ ಮಾಡುತ್ತಿರುವ ಎಂಜಿನಿಯರ್ ಬಿಟ್ಟು ಉಳಿದೆಲ್ಲವರಿಗೂ ಶುಭಾಶಯ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಲ್ಲರ ಗಮನ ಸೆಳೆಯಿತು. ರೈಲ್ವೆ ಮೇಲ್ಸೆತುವೆ
ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು, ಅದಕ್ಕಾಗಿ ಆಕ್ರೋಶಗೊಂಡ ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ತರಹ ವಿಭಿನ್ನವಾಗಿ ಶುಭಾಶಯ ತಿಳಿಸಿದ್ದಾರೆ.