ವಿಜಯಪುರ: ಕುತೂಹಲ ಮೂಡಿಸಿದ್ದ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ 35 ವಾರ್ಡ್ಗಳಿಗೆ ಮೀಸಲಾತಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಗೊಂಡಿದ್ದು, ಆಕ್ಷೇಪಣೆಗಳಿಗೆ ಏಳು ದಿನಗಳ ಕಾಲಾವಾಕಾಶ ನೀಡಲಾಗಿದೆ.
ಆ ಮೂಲಕ ಮೀಸಲಾತಿ ಪ್ರಕಟಗೊಳ್ಳುತ್ತಿದ್ದಂತೆ ಆಕಾಂಕ್ಷಿಗಳು ಕಾಲಿಗೆ ಚಕ್ರ ಕಟ್ಟಿಕೊಂಡು ತಾವು ಪ್ರತಿನಿಧಿಸಬೇಕಿರುವ ವಾರ್ಡ್ಗಳಲ್ಲಿ ಕಾರ್ಯಪ್ರವೃತ್ತರಾಗುವಂತಾಗಿದೆ.
ಮೀಸಲಾತಿ ವಿವರ
ವಾರ್ಡ್ ನಂ.೧ : ಹಿಂದುಳಿದ ವರ್ಗ `ಅ’ ಮಹಿಳೆ, ವಾರ್ಡ್ ನಂ.೨ : ಪರಿಶಿಷ್ಟ ಜಾತಿ, ವಾರ್ಡ್ ನಂ.೩ ; ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ನಂ.೪ : ಸಾಮಾನ್ಯ, ವಾರ್ಡ್ ನಂ.೫ : ಹಿಂದುಳಿದ ವರ್ಗ ಬ ಮಹಿಳೆ, ವಾರ್ಡ್ ನಂ.೬ : ಸಾಮಾನ್ಯ, ವಾರ್ಡ್ ನಂ.೭ : ಹಿಂದುಳಿದ ವರ್ಗ ಅ, ವಾರ್ಡ್ ನಂ.೮ ; ಸಾಮಾನ್ಯ ಮಹಿಳೆ, ವಾರ್ಡ್ ನಂ.೯ : ಹಿಂದುಳಿದ ವರ್ಗ ಬ, ವಾರ್ಡ್ ನಂ.೦ : ಸಾಮಾನ್ಯ, ವಾರ್ಡ್ ನಂ.೧೧ : ಪರಿಶಿಷ್ಟ ಜಾತಿ, ವಾರ್ಡ್ ನಂ.೧೨ : ಸಾಮಾನ್ಯ, ವಾರ್ಡ್ ನಂ.೧೩ : ಹಿಂದುಳಿದ ವರ್ಗ ಅ, ವಾರ್ಡ್ ನಂ.೧೪ : ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ನಂ.೧೫ ; ಸಾಮಾನ್ಯ ಮಹಿಳೆ, ವಾರ್ಡ್ ನಂ.೧೬ : ಹಿಂದುಳಿದ ವರ್ಗ ಅ ಮಹಿಳೆ, ವಾರ್ಡ್ ನಂ.೧೭ : ಸಾಮಾನ್ಯ, ವಾರ್ಡ್ ನಂ.೧೮ : ಪರಿಶಿಷ್ಟ ಪಂಗಡ, ವಾರ್ಡ್ ನಂ.೧೯ ; ಸಾಮಾನ್ಯ, ವಾರ್ಡ್ ನಂ.೨೦ : ಹಿಂದುಳಿದ ವರ್ಗ ಅ, ವಾರ್ಡ್ ನಂ.೨೧ ; ಸಾಮಾನ್ಯ ಮಹಿಳೆ, ವಾರ್ಡ್ ನಂ.೨೨ : ಹಿಂದುಳಿದದ ವರ್ಗ ಅ, ವಾರ್ಡ್ ನಂ.೨೩ : ಸಾಮಾನ್ಯ, ವಾರ್ಡ್ ನಂ.೨೪ : ಸಾಮಾನ್ಯ, ವಾರ್ಡ್ ನಂ.೨೫ : ಹಿಂದುಳಿದ ವರ್ಗ ಅ, ವಾರ್ಡ್ ನಂ.೨೬ : ಸಾಮಾನ್ಯ ಮಹಿಳೆ, ವಾರ್ಡ್ ನಂ.೨೭ : ಹಿಂದುಳಿದ ವರ್ಗ ಅ ಮಹಿಳೆ, ವಾರ್ಡ್ ನಂ.೨೮ : ಸಾಮಾನ್ಯ, ವಾರ್ಡ್ ನಂ.೨೯ ; ಪರಿಶಿಷ್ಟ ಜಾತಿ, ವಾರ್ಡ್ ನಂ.೩೦ : ಹಿಂದುಳಿದ ವರ್ಗ ಅ, ವಾರ್ಡ್ ನಂ.೩೧ : ಸಾಮಾನ್ಯ ಮಹಿಳೆ, ವಾರ್ಡ್ ನಂ.೩೨ ; ಸಾಮಾನ್ಯ ಮಹಿಳೆ, ವಾರ್ಡ್ ನಂ.೩೩ ; ಸಾಮಾನ್ಯ ಮಹಿಳೆ, ವಾರ್ಡ್ ನಂ.೩೪ : ಸಾಮಾನ್ಯ ಮಹಿಳೆ, ವಾರ್ಡ್ ನಂ.೩೫ : ಸಾಮಾನ್ಯ ಮಹಿಳೆಗೆ ಮೀಸಲಿರಿಸಲಾಗಿದೆ.