ವಿಜಯಪುರ: ವಿಜಯಪುರ ನಗರಾದ್ಯಂತ ಆರ್.ಎ.ಎಫ್ನವರು ರವಿವಾರ ರೂಟ್ ಮಾರ್ಚ್ ಮಾಡಿದರು.
ಗಾಂಧಿಚೌಕ್ ಸಿಪಿಐ ಸಿದ್ಧೇಶ ನೇತೃತ್ವದಲ್ಲಿ ಆರ್.ಎ.ಎಫ್ ಹಾಗೂ ಪೊಲೀಸ ಸಿಬ್ಬಂದಿಗಳು ರೂಟ್ ಮಾರ್ಚ್ ನಡೆಸಿದರು. ನಗರದ ಗಾಂಧಿಚೌಕ್, ಬಸವೇಶ್ವರ ಸರ್ಕಲ್, ನವಭಾಗ ಸೇರಿದಂತೆ ವಿವಿಧ ಕಾಲೋನಿಯಲ್ಲಿ ರೂಟ್ ಮಾರ್ಚ್ ನಡೆಯಿತು. ಅಲ್ಲದೇ, ನಗರದಲ್ಲಿ ಅಹಿತಕರ ಘಟನೆಗಳು ಆಗದಂತೆ ಪೊಲೀಸ ಇಲಾಖೆಯವರು ಜನತೆಗೆ ರೂಟ್ ಮಾರ್ಚ್ ಮೂಲಕ ಜಾಗೃತಿ ಮೂಡಿಸಿದರು.