- ವಿಜಯಪುರ ::
ವಿಜಯಪುರದ ಮನಗೂಳಿ ಅಗಸಿ ಬಳಿ ಮಳೆಯಿಂದಾಗಿ ರಸ್ತೆ ಹಾಳಾಗಿ ಗುಂಡಿ ಬಿದ್ದು ಅದರಲ್ಲಿ ನೀರು ನಿಂತಿತ್ತು, ವಾಹನಗಳು ಆ ಗುಂಡಿ ಮೇಲೆ ಹಾದು ಹೋಗುವಾಗ ಇತರ ವಾಹನ ಸವಾರರಿಗೆ ಆ ನೀರು ಸಿಡಿದು ಆವಾಂತರ ಸೃಷ್ಟಿಸುತಿತ್ತು.
ಈ ಸಮಸ್ಯೆಯನ್ನು ನೋಡಿದ ಟ್ರಾಫಿಕ್ ಪೋಲಿಸರು ಆ ಗುಂಡಿಯನ್ನು ಮುಚ್ಚಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟಿರುವುದು ಶ್ಲಾಘನೀಯ.

ಇದು ನಮ್ಮ ಕೆಲಸವಲ್ಲ ಎಂದು ಸುಮ್ಮನೆ ಇರದೆ, ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡಿದ ಪೋಲಿಸರಿಗೆ ಜಿಲ್ಲೆಯ ಜವಾಬ್ದಾರಿಯುತ ಸಾರ್ವಜನಿಕರ ಪರವಾಗಿ ಧನ್ಯವಾದಗಳು.

ನಿಮ್ಮ ಕೆಲಸ ನಿಜಕ್ಕೂ ಖುಷಿ ಮತ್ತು ಪ್ರೇರಣೆ ನೀಡುವಂತದ್ದು.
ಡಾ ಬಾಬುರಾಜೇಂದ್ರ ನಾಯಿಕ್
ಮಧುಮೇಹ ತಜ್ಞರು
ಶ್ರೀ ತುಳಸಿಗಿರೀಶ ಮಧುಮೇಹ ತಜ್ಞರು ವಿಜಯಪುರ




