ವಿಜಯಪುರ: DCಗೆ ಕೊಡ್ತೀರ.. JCಗೆ ತಲುಪಿಸ್ತೀರ ನನ್ನದೇಕಿಲ್ಲ, ಯಾರ್ದು ಕೊಡ್ತೀರೋ ಬಿಡ್ತಿರೋ..ನನ್ನದಂತೂ ಬೇಕು. ಇದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಅಬಕಾರಿ ಅಧಿಕಾರಿ ಡೀಲ್ ಕಹಾನಿ. ಬಾರ್ ಮಾಲೀಕರಿಂದ ಅಬಕಾರಿ ಇನ್ಸ್ಪೆಕ್ಟರ್ ಜ್ಯೋತಿ ಮೇತ್ರಿ ಲಂಚದ ಡೀಲ್ನ ವಿಡಿಯೋ ವೈರಲ್ ಆಗಿದೆ.
ಬಾರ್ ಮಾಲೀಕರ ಜತೆ ಜ್ಯೋತಿ ಮಾತ್ನಾಡಿರೋ ಆಡಿಯೋ ಇದಾಗಿದ್ದು, ವಿಜಯಪುರ, ಸಿಂದಗಿ, ಇಂಡಿ ಮುಗೀತು. ಜೆಸಿಗೂ ಆಯ್ತು, ನನ್ನದೊಂದೇ ಯಾಕೆ ಇಷ್ಟು ಕಾಡ್ತಿದ್ದೀರಿ ಜ್ಯೋತಿ ಎಂದಿದ್ಧಾರೆ. ಡಿಸಿಯವ್ರೇ JC ಮುಂದೆ ತಗೊಂಡಿನಿ ಅಂತಾ ಓಪನ್ ಆಗಿ ಹೇಳಿದ್ದಾರೆ. ನಾಲ್ಕು ತಾಲೂಕಿನಿಂದ ತಗೊಂಡಿನಿ, ವಿಜಯಪುರ ಒಂದೇ ಬಾಕಿ. ದೊಡ್ಡ ಮನಸ್ಸು ಮಾಡಿದ್ದೀರಿ. ಅಧಿಕಾರಿ 2 ತಿಂಗಳದ್ದು ಕೊಟ್ಟು ಮುಗಿಸಿ. ಮುಂದಿನ ಸಲ ಯಾವ ಡೇಟ್ಗೆ ಮಾಡೋಣ ಎಂದಿದ್ದಾರೆ. ಬಾರ್ ಮಾಲೀಕರು ಎಲ್ಲ ರೊಕ್ಕ ತಂದು ಕೊಡ್ತೀವಿ ಎಂದಿದ್ಧಾರೆ. ವಿಜಯಪುರ ಜಿಲ್ಲೆಯಲ್ಲಿ ಜ್ಯೋತಿ ವಿಡಿಯೋ ಭಾರೀ ವೈರಲ್ ಆಗಿದೆ.