ವಿಜಯಪುರ: ಜೂಲುಸ್ ಇ ಈದ್ ಮಿಲಾದುನ್ನಬಿ ಕಮಿಟಿ ನೇತೃತ್ವದಲ್ಲಿ ಜೂಲುಸ್ ಶಾಂತಿ ಯಾತ್ರೆ ನಡೆಯಿತು. ಅಲ್ಪಸಂಖ್ಯಾತ ಧರ್ಮಗುರು ಸೈಯದ್ ತನ್ವೀರ ಪೀರಾ ಹಾಸ್ಮಿ ಅವರು ಶಾಂತಿ ಯಾತ್ರೆಗೆ ಚಾಲನೆ ನೀಡಿದರು.
ಅಲ್ಲದೇ, ವಿಜಯಪುರ ನಗರಾದ್ಯಂತ ಶಾಂತಿ ಯಾತ್ರೆ ಮೆರವಣಿಗೆ ಮಾಡಲಾಯಿತು. ಇನ್ನೂ ಯಾತ್ರೆಯಲ್ಲಿ ಹಜರತ್ ಮಹಮ್ಮದ್ ಪೈಗಂಬರ್ ಅವರು ಪ್ರೀತಿ, ಸೌಹಾರ್ದದಿಂದ ಬಾಳಲು ದಾರಿ ತೋರಿಸಿದ್ದಾರೆ. ಇದನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು ಎಂದು ಶಾಂತಿ ಸಂದೇಶ ಸಾರಿದರು. ಶಾಂತಿ ಯಾತ್ರೆಯಲ್ಲಿ ಧಾರ್ಮಿಕ ಮುಖಂಡರು, ಸ್ಥಳೀಯರು ಭಾಗವಹಿಸಿದರು.