ಸಚಿವ ಬಿ.ನಾಗೇಂದ್ರ ರಾಜೀನಾಮೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನೆ.

Karnataka 1 News
ಸಚಿವ ಬಿ.ನಾಗೇಂದ್ರ ರಾಜೀನಾಮೆ  ಆಗ್ರಹಿಸಿ ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನೆ.

ವಿಜಯಪುರ : ವಿಜಯಪುರ: ಸಚಿವ ಬಿ.ನಾಗೇಂದ್ರ ರಾಜೀನಾಮೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾ ಬಿಜೆಪಿ ನಗರದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿತು.

ಬೆಳಗ್ಗೆ ನಗರದ ಡಾ.ಅಂಬೇಡ್ಕರ ಸರ್ಕಲ್ ಬಳಿ ಆರಂಭವಾದ ಹೋರಾಟದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಬ್ರಷ್ಟ ಸಚಿವನ ರಾಜೀನಾಮೆಯನ್ನು ಕಾಂಗ್ರೆಸ್ ಪಡೆಯಲೇಬೇಕು, ಇಲ್ಲವಾದಲ್ಲಿ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದು ಮುಖಂಡರು ಒತ್ತಾಯಿಸಿದರು.

 

ಈ ಸಂದರ್ಭದಲ್ಲಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಾಗೇಂದ್ರೆ ಅವರು 175 ಕೋಟಿ ರೂ. ಅವ್ಯವಹಾರ ಎಸಗಿದ್ದು ನಿಜ ಎಂದು ಒಪ್ಪಿಕೊಂಡು, ಈಗ ಮತ್ತೆ ನಾಗೇಂದ್ರಗೆ ಸಚಿವ ಸ್ಥಾನ ಕೊಟ್ಟಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನವರು ಎಸ್‌ಸಿ/ಎಸ್‌ಟಿ/ ಅಲ್ಪಸಂಖ್ಯಾತರ ಪರ ಎಂದು ಹೇಳಿಕೊಂಡು ಈ ಸಮುದಾಯದ ಅನುದಾನವನ್ನು ದುರ್ಬಳಕೆ ಮಾಡಲಾಗಿದೆ. ನಾಗೇಂದ್ರ ಅವರು ಅಕ್ರಮ ಎಸಗಿದ್ದಾರೆ ಎಂದು ಕಾಂಗ್ರೆಸ್‌ನವರೇ ಒಪ್ಪಿಕೊಂಡು, ಈಗ ಅವರಿರನ್ನೇ ಮಂತ್ರಿ ಮಾಡಿರುವುದು ಯಾವ ನ್ಯಾಯ?, ಎಂದು
ವಾಲ್ಮಿಕಿ ನಿಗಮದ ಅನುದಾನವನ್ನು ದುರ್ಬಳಕೆ ಮಾಡಿದ ವ್ಯಕ್ತಿಗೆ ಮಂತ್ರಿಸ್ಥಾನ ಕೊಟ್ಟಿರುವುದು ಸರಿಯೇ ಎಂದು ಪ್ರಶ್ನಿಸಿದ ರಮೇಶ ಜಿಗಜಿಣಗಿ ಅವರು, ನಾಗೇಂದ್ರ ಅವರ ರಾಜೀನಾಮೆ ಪಡೆಯುವ ತನಕ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಬ್ರಷ್ಟಾಚಾರ ಮಾಡಿದ ಶಾಸಕ ಬಿ.ನಾಗೇಂದ್ರ ಅವರನ್ನು ಮಂತ್ರಿಮAಡಲದಲ್ಲಿ ಸೇರಿಸಿಕೊಂಡಿದ್ದು ಖಂಡನೀಯವಾಗಿದೆ. ವಾಲ್ಮಿಕಿ ನಿಗಮವನ್ನೇ ಲೂಟಿ ಮಾಡಿದ ಸಚಿವ ಬಿ.ನಾಗೇಂದ್ರ ರಾಜೀನಾಮೆ ಕೊಡಬೇಕು. ವಿಜಯಪುರ ಜಿಲ್ಲೆಯನ್ನು ಬರಗಾಲ ಎಂದು ಘೋಷಣೆ ಮಾಡಬೇಕು. ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಜಿಲ್ಲೆಯಾದ್ಯಂತ ಮೇವು ಬ್ಯಾಂಕ್ ಹಾಗೂ ಗೋಶಾಲೆ ತೆರೆಯಬೇಕು ಎಂದು ಒತ್ತಾಯಿಸಿದರು. ಕಳೆದ ಮೂರು ವರ್ಷದಲ್ಲಿ ರೈತರನ್ನು ಕಡೆಗಣನೆ ಮಾಡಲಾಗುತ್ತಿದೆ. ಅಧಿವೇಷನದಲ್ಲಿ ನಮ್ಮ ಮುಖಂಡರು ಪ್ರಶ್ನಿಸಿದರೂ ಕಾಂಗ್ರೆಸ್‌ನವರಿಗೆ ಉತ್ತರ ಕೊಡಲು ಆಗುತ್ತಿಲ್ಲ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಬ್ರಷ್ಟಾಚಾರದ ಆರೋಪ ಹೊತ್ತಿದ್ದ ನಾಗೇಂದ್ರನನ್ನು ಸಿದ್ಧರಾಮಯ್ಯನವರು ತೆಗೆದು ಹಾಕಿದರು. ಆದರೆ ಡಿ.ಕೆ.ಶಿವಕುಮಾರ ರವರು ಮತ್ತೆ ಅದೇ ಬ್ರಷ್ಟನನ್ನು ತಮ್ಮ ಸಂಪುಟದಲ್ಲಿ ಸೇರಿಸಿಕೊಂಡು ಉದ್ಧಟತನ ಮೆರೆದಿದ್ದಾರೆ. ಆತನನ್ನು ಹೊರಗಿಟ್ಟು ಅಧಿವೇಷನ ನಡೆಸಬೇಕು, ಆತನನ್ನು ಸಂಪುಟದಿAದ ಕೈ ಬಿಡಬೇಕು. ರಾಜ್ಯದಲ್ಲಿ ತೀವ್ರ ಬರಗಾಲವಿರುವ ಹಿನ್ನೆಲೆ ಜಿಲ್ಲೆ ಸೇರಿದಂತೆರೆಲ್ಲೆಡೆ ಬರಗಾಲ ಘೋಷಿಸಬೇಕು. ಕಾಂಗ್ರೆಸ್ ಸರ್ಕಾರದ ಚರ್ಮ ದಪ್ಪವಾಗಿದ್ದು, ಈ ಸರ್ಕಾರವನ್ನೇ ವಿಸರ್ಜಿಸಬೇಕಿದೆ. ಗ್ಯಾರಂಟಿ ಹೆಸರಿನಲ್ಲಿ ಜನರನ್ನು ಮೋಸಗೊಳಿಸಲಾಗುತ್ತಿದೆ. ಸಾರಿಗೆ ವ್ಯವಸ್ಥೆಯಲ್ಲಿ ಬಸ್ಸುಗಳಿಲ್ಲ, ಮಾಶಾಸನ ಬಂದಿಲ್ಲ, ಬೆಳೆ ವಿಮೆಗಳು ಬರುತ್ತಿಲ್ಲ. ಕಳಪೆ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಕಾಸುಗೌಡ ಬಿರಾದಾರ ಮಾತನಾಡಿ, ಭ್ರಷ್ಟಾಚಾರ ಆರೋಪ ಹೊತ್ತಿರುವ ನಾಗೆಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದು ಖಂಡನೀಯ ಅವರನ್ನು ತಕ್ಷಣವೇ ಸಚಿವ ಸಂಪುಟದಿAದ ಕೈ ಬಿಡಬೇಕು . ಸರ್ಕಾರ ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದರು.

 

ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ, ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕ ಅರುಣ ಶಹಾಪುರ, ವಿಜಯಕುಮಾರ ಪಾಟೀಲ, ರಮೇಶ ಭೂಸನೂರ, ಸಂಜೀವ ಐಹೊಳ್ಳಿ, ಕಾಸುಗೌಡ ಬಿರಾದಾರ, ಉಮೇಶ ಕಾರಜೋಳ, ವಿವೇಕಾನಂದ ಡಬ್ಬಿ, ಗೋಪಾಲ ಘಟಕಾಂಬಳೆ, ಚಂದ್ರಶೇಖರ ಕವಟಗಿ, ಉಮೇಶ ಕೋಳಕೂರ, ಮಳುಗೌಡ ಪಾಟೀಲ, ಎಸ್.ಎ.ಪಾಟೀಲ, ಹಣಮಂತರಾಯಗೌಡ ಪಾಟೀಲ, ಮಲ್ಲಿಕಾರ್ಜುನ ಕಿವುಡೆ, ರಾಘವೇಂದ್ರ ಕಾಪ್ಸೆ, ಅನೀಲ ಜಮಾದಾರ, ಶೀಲವಂತ ಉಮರಾಣಿ, ರವಿ ವಗ್ಗೆ, ಈರಣಗೌಡ ಪಾಟೀಲ, ನಾಗೇಶ ಸರ್ವಜ್ಞ, ನಾಗು ಹುನ್ನೂರ, ಭೀಮಾಶಂಕರ ಆಳೂರ, ಚೆಲುವರಾಜ ತೇಲಿ, ಚನ್ನಯ್ಯ ಸ್ವಾಮಿ, ಬಸಮ್ಮ ಮರಡಿ,ಶ್ರೀದೇವಿ ಕುಲಕರ್ಣಿ, ಅನ್ನಪ್ಪ ಖೈನೂರ (ಹೊರ್ತಿ), ಸ್ವಪ್ನಾ ಕನಮುಚನಾಳ, ಚಿದಾನಂದ ಚಲವಾದಿ, ರಾಜಕುಮಾರ ಸಗಾಯಿ, ಭೀಮಾಶಂಕರ ಹದನೂರು, ಕೃಷ್ಣಾ ಗುನ್ಹಾಳಕರ, ರಾಜೇಶ ತವಸೆ, ವಿಜಯ ಜೋಷಿ, ಕಾಂತು ಶಿಂಧೆ, ಮಂಜುನಾಥ ಮೀಸೆ, ಸಚೀನ ಬೊಂಬಳೆ, ಭರತ ಕೋಳಿ, ರಜನಿ ಸಂಬಣ್ಣಿ, ಭಾರತಿ ಭುಯ್ಯಾರ, ಪ್ರಭುಗೌಡ ಅಸ್ಕಿ, ಬಸವರಾಜ ಬೈಚಬಾಳ, ಸೇರಿದಂತೆ ಪಕ್ಷದ ರಾಜ್ಯ ಪದಾಧಿಕಾರಿಗಳು ಜಿಲ್ಲಾ ಪದಾಧಿಕಾರಿಗಳು ಮಂಡಲ ಅಧ್ಯಕ್ಷರು ಪದಾಧಿಕಾರಿಗಳೂ ಕಾರ್ಯಕರ್ತರು ಉಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";