*ವಿಜಯಪುರ ನಗರದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದವರ ಬಂಧನ ಕುರಿತು*
ದಿನಾಂಕ: 28.12.2024 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ಶ್ರೀ ರಾಜು ಮಮದಾಪೂರ, ಪಿಎಸ್ಐ ಗಾಂಧಿಚೌಕ ಇವರಿಗೆ ವಿಜಯಪುರದ ವಾಟರ್ ಟ್ಯಾಂಕ್ ಹತ್ತಿರ ಇರುವ ಒಂದು ಹಾಲಿನ ಅಂಗಡಿಯಲ್ಲಿ 500 ರೂ.
ಮುಖ ಬೆಲೆಯ ಖೋಟಾ ನೋಟು ಕೊಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಆಧಾರದ ಮೇಲೆ ಗಾಂಧಿಚೌಕ ಪಿಎಸ್ಐ ಹಾಗೂ ಸಿಬ್ಬಂದಿ ಜನರು ಸೇರಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ಆತನಿಗೆ ವಿಚಾರಿಸಲಾಗಿ ರಿಯಾಜ್ ಕಾಶಿಮಸಾಬ ವಾಲಿಕಾರ, 44 ವರ್ಷ, ಉದ್ಯೋಗ: ಕೆಎಸ್ಆರ್ಟಿಸಿ ಮೆಕ್ಯಾನಿಕ್, ಸಾ: ವಜ್ರ ಹನುಮಾನ ನಗರ, ವಿಜಯಪುರ ಅಂತಾ ತಿಳಿಸಿದ್ದು, ಆತನ ಹತ್ತಿರ 500 ರೂ. ಮುಖ ಬೆಲೆಯ 5 ಖೋಟಾ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಈ ಕುರಿತು ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಶ್ರೀ ಲಕ್ಷ್ಮಣ ನಿಂಬರಗಿ, ಪೊಲೀಸ್ ಅಧೀಕ್ಷಕರು, ವಿಜಯಪುರ ರವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆಗಾಗಿ ಶ್ರೀ ಪ್ರದೀಪ ತಳಕೇರಿ, ಪಿಐ ಗಾಂಧಿಚೌಕ ರವರ ನೇತೃತ್ವದಲ್ಲಿ ಒಂದು ತನಿಖಾ ತಂಡವನ್ನು ರಚಿಸಿದ್ದು, ಸದರಿ ತಂಡದವರು
1. ಲಿಂಗಸೂರಿನ ದುರಗಪ್ಪ ಶಿವಣಪ್ಪ ರಾಮರಟ್ಟಿ, 44 ವರ್ಷ ಈತನಿಂದ 500 ರೂ. ಮುಖ ಬೆಲೆಯ 20 ಖೋಟಾ ನೋಟುಗಳು,
2. ಮಹಾಲಿಂಗಪೂರದ ಕಿರಣ @ ಭೀಮಪ್ಪ ರಾಮಪ್ಪ ಹರಿಜನ, 25 ವರ್ಷ ಈತನಿಂದ 500 ರೂ. ಮುಖ ಬೆಲೆಯ 100 ಖೋಟಾ ನೋಟುಗಳು.
3. ಕೋಲಾರ ಹತ್ತಿರದ ಹೊಳೆಹಂಗರಗಿ ಗ್ರಾಮದ ರಮೇಶ ಹಣಮಂತ ಸವಳತೋಟ, 44 ವರ್ಷ ಇತನಿಂದ 500 ರೂ. ಮುಖ ಬೆಲೆಯ 120 ಖೋಟಾ ನೋಟುಗಳು,
ಹೀಗೆ ಒಟ್ಟು 4 ಜನ ಆರೋಪಿತರಿಂದ 500 ರೂ. ಮುಖ ಬೆಲೆಯ ಒಟ್ಟು ರೂ. 1.22,500/- ಮೊತ್ತದ 245 ಖೋಟಾ ನೋಟುಗಳನ್ನು ಜಪ್ತು ಮಾಡಿ. ಸದರಿ ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಸ್ತುತ ಆರೋಪಿತರು ಮಾನ್ಯ ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ. ಪ್ರಸ್ತುತ ಪ್ರಕರಣವು ತನಿಖಾ ಹಂತದಲ್ಲಿ ಇರುತ್ತದೆ.
ಸದರಿ ಪ್ರಕರಣದ ತನಿಖಾ ತಂಡದಲ್ಲಿ ಭಾಗವಹಿಸಿದ 1) ಪ್ರದೀಪ ತಳಕೇರಿ, ಪಿ.ಐ ಗಾಂಧಿಚೌಕ, 2) ರಾಜು ಮಮದಾಪುರ, ಪಿಎಸ್ಐ, 3) ಸುಷ್ಮಾ ನಂದಿಗೋಣ, ಪಿಎಸ್ಐ, 4) ಅನೀಲ ದೊಡಮನಿ, ಸಿಎಚ್ಸಿ-1209, 5) ರಾಜು ನಾಯಕ, ಸಿಎಚ್ ಸಿ-1260, 6) ಎಸ್ ಪಿ ಗದ್ಯಾಳ ಸಿಪಿಸಿ-535, 7) ಜಿ ಎಚ್ ಮುಲ್ಲಾ ಸಿಪಿಸಿ – 752, 8) ಕೆ ಜೆ ರಾಠೋಡ ಸಿಪಿಸಿ -1621, 9) ವಿ ಎಚ್ ಕಡ್ಲಿಬಾಳು ಸಿಪಿಸಿ -1857, 10) ಆರ್ ಎಸ್ ಗೋದೆ ಸಿಪಿಸಿ-1841 11) ಬಸವರಾಜ ದಿನ್ನಿ, ಸಿಪಿಸಿ-1122, 12) ಎಚ್.ಎಚ್ ಜಮಾದಾರ, ಸಿಎಚ್ ಸಿ-1270 ಹಾಗೂ ಕಂಪ್ಯೂಟರ್ ವಿಭಾಗದ ಗುಂಡು ಗಿರಣಿವಡ್ಡರ, ಸಿಎಚ್ ಸಿ-1361 ಸುನೀಲ್ ಗವಳಿ ಸಿಎಚ್ ಸಿ -1244 ರವರುಗಳ ಕಾರ್ಯವನ್ನು ಶ್ಲಾಘಿಸಲಾಗಿದೆ.