ವಿಜಯಪುರ: ಯುರೋಪ್, ರಷ್ಯಾ, ಅಮೆರಿಕ, ಇರಾನ್ ತಾವು ಮುಂದು ಎಂದು ಕಹಲ ಹೆಚ್ಚಳವಾಗುತ್ತದೆ ಎಂದು ಬಬಲಾದಿ ಮಠದ ಸಿದ್ರಾಮಯ್ಯ ಹೊಳಿಮಠ ಶ್ರೀಗಳು ಭವಿಷ್ಯ ನುಡಿದರು.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಮಠದಲ್ಲಿ ಭವಿಷ್ಯ ನುಡಿದ ಅವರು, ದೇಶದಲ್ಲಿ ಅಹಂಕಾರವಾಗಿ ಕೆಟ್ಟ ಪರಿಣಾಮ ಬೀರುತ್ತದೆ. ಜಗತ್ತಿನಲ್ಲಿ ಅತಿ ಕೆಟ್ಟ ಪರಿಸ್ಥಿತಿಯಾಗಿ ಪಾಪ ಹೆಚ್ಚಾಗುತ್ತದೆ. ದೇಶದಲ್ಲಿ ಶಾಂತಿ ಸೌಹಾರ್ದದ ಕೊರತೆ ಇದೆ. ಏಪ್ರಿಲ್ನಿಂದ ಅಗಸ್ಟ್ ವರೆಗೂ ಪಾಪ ಕೈ ಮೀರಿ ಹೋಗುತ್ತದೆ ಎಂದರು. ಇನ್ನು ಸುನಾನಿ, ಗಾಳಿ, ಭೂಕಂಪನ ಆಗುತ್ತದೆ. ಮುಂಗಾರು ಮಳೆಯಾಗಿ ಬೆಳೆಗಳು ಹೆಚ್ಚಾಗುತ್ತದೆ. ಹಿಂಗಾರು ಮಳೆಯಲ್ಲಿ ಮಧ್ಯಮ ಬೆಳೆ ಇದೆ ಎಂದರು.