ವಿಜಯಪುರ: ಉಕ್ರೇನ್ನಿಂದ ವಿಜಯಪುರದ ವಿದ್ಯಾರ್ಥಿನಿ ಜಿಲ್ಲೆಗೆ ಆಗಮಿಸಿದ್ದಾಳೆ. ವಿಜಯಪುರದ ಸಾಯಿ ಪಾರ್ಕ್ ನಿವಾಸಿ ರಕ್ಷಾ ಶಿವಾಜಿ ಕಂಬಾಗಿ ಇಂದು ವಿಜಯಪುರಕ್ಕೆ ಬಂದಿದ್ದಾರೆ.
ಇನ್ನು ಮನೆಯಲ್ಲಿ ಕೆಕ್ ಕತ್ತಿರಿಸಿ ಮಗಳಿಗೆ ತಿನ್ನಿಸಿ ಪೋಷಕರು ಬರ ಮಾಡಿಕೊಂಡರು. ಇನ್ನು ಇದೇ ವೇಳೆಯಲ್ಲಿ ಮಗಳಿಗೆ ತಾಯಿ, ಸಹೋದರರು ಶಾಲು ಹೊದಿಸಿ ಸನ್ಮಾನಿಸಿದರು. ಅಲ್ಲದೇ, ಈ ಸಂದರ್ಭದಲ್ಲಿ ಸಂಬಂಧಿಕರು, ಅಕ್ಕಪಕ್ಕದವರ ಉಪಸ್ಥಿತರಿದ್ದರು.