ವಿಜಯಪುರ: ಲಕ್ಷಾಂತರ ಮೌಲ್ಯದ ಚಿನ್ನ, ಎಲ್ಐಸಿ ಬಾಂಡ್ ಹಾಗೂ ನಗದು ಆಟೋ ಚಾಲಕ ಮರಳಿ ಮಾಲೀಕರಿಗೆ ನೀಡಿ ಮಾನವೀಯತೆ ಮೆರೆದಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.
ಅಬ್ದುಲ್ ರಜಾಕ್ ಕಾಖಂಡಕಿ ಚಿನ್ನ ಮರಳಿಸಿ ಮಾನವೀಯತೆ ಮೆರೆದ ಆಟೋ ಚಾಲಕ. ಇನ್ನು ಪ್ಯಾಸೆಂಜರ್ ಅಶೋಕ ಗಬ್ಬೂರ ಅವರು ಕೆಲಸದ ಒತ್ತಡದಲ್ಲಿ ಆಟೋದಲ್ಲಿ ಚಿನ್ನ ಬಿಟ್ಟು ಹೋಗಿದ್ದರು. ಆದ್ರೇ ಕಾಖಂಡಕಿ ಸಂಚಾರಿ ಪೊಲೀಸ ಠಾಣೆಗೆ ಆಗಮಿಸಿ ಪಿಎಸ್ಐ ಸಂಜಯ್ ಕಲ್ಲೂರ ಸಮ್ಮುಖದಲ್ಲಿ ಚಿನ್ನಾಭರಣಗಳ ಮಾಲೀಕ ಅಶೋಕಗೆ ನೀಡಿದ್ದಾರೆ. ಆಟೋ ಚಾಲಕ ಕಾಖಂಡಕಿ ಮಾನವೀಯತೆ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.