ಬೆಂಗಳೂರು: ಲಕ್ನೋ ವಿರುದ್ಧ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯಭೇರಿ ಸಾಧಿಸಿ ಸೆಮಿಫೈನಲ್ಗೆ ಎಂಟ್ರಿ ಕೊಟ್ಟಿದೆ. ನಾಳೆ ನಡೆಯುವ ರಾಜಸ್ಥಾನ ರಾಯಲ್ಸ್ ಮತ್ತು ಆರ್ಸಿಬಿ ನಡುವೆ ಬಿಗ್ ಪೈಟ್ ಫೈನಲ್ ಕಾದಾಟ ನಡೆಯಲಿದೆ.
ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ರಾಹುಲ್ ತಂಡದ ವಿರುದ್ಧ 14 ರನ್ಗಳಿಂದ ಡುಪ್ಲೆಸಿ ಪಡೆ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ರಜತ್ ಪಾಟಿದಾರ್ ಭರ್ಜರಿ ಸೆಂಚುರಿ ನೆರವಿನೊಂದಿಗೆ 208 ರನ್ ಗಳಿಸಿತ್ತು. ಬೃಹತ್ ಮೊತ್ತ ಬೆನ್ನತ್ತಿದ ಲಖನೌ ತಂಡಕ್ಕೆ ಕೆ.ಎಲ್.ರಾಹುಲ್ 78 ರನ್ ಸಿಡಿಸಿ ಗೆಲುವಿನ ಲಯಕ್ಕೆ ತಂದಿದ್ದರು. ಆದರೆ ಕೊನೆ ಕ್ಷಣದಲ್ಲಿ ರಾಹುಲ್ ವಿಕೆಟ್ ಕಿತ್ತ ಹೇ’ವುಡ್ ತಂಡಕ್ಕೆ ಗೆಲುವಿನ ದಡ ಸೇರಿಸಿದರು. ಆರ್ಸಿಬಿ ಪರ ಹರ್ಷಲ್ ಪಟೇಲ್ ಶಿಸ್ತುಬದ್ಧ ಬೌಲಿಂಗ್ ಮಾಡಿದರು.