ವಿಜಯಪುರ: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಮಂದಿಗೆ ಭಾನುವಾರ ರಾತ್ರಿ 1-53ಕ್ಕೆ ಲಘು ಭೂಕಂಪನದ ಅನುಭವವಾಗಿದ್ದು, ಸಾರ್ವಜನಿಕರು ಭೀತಿಗೊಳ್ಳುವಂತಾಗಿದೆ.
ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದ ಬಡಾವಣೆಯಲ್ಲಿ, ರಾತ್ರಿ ಏಕಾಏಕಿ ಜೂರಾದ ಸದ್ದಿನೊಂದಿಗೆ ಒಂದು ಸೆಕೆಂಡಿನಷ್ಟು ಭೂಮಿ ಕಂಪಿಸುತ್ತಿದ್ದಂತೆ, ಮನೆಯ ಹೊರಗಡೆ ಮಲಗಿದ್ದ ಜನರು, ಏಕಾಏಕಿ ಎದ್ದು ಗಾಬರಿಗೊಂಡು ಓಡುವಂತಾಗಿದೆ. ಅಲ್ಲದೆ ಈ ಭೂಮಿ ಕಂಪನದ ಸದ್ದಿಗೆ ಆಕಳು, ಕರು, ಶ್ವಾನಗಳು ಕೂಡ ಭೀತಿಗೊಂಡು ಕೆಲ ಹೊತ್ತು ಜೋರಾಗಿ ಒದರುವಂತಾಗಿದೆ.