ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಆಳೂರ ಗ್ರಾಮದ ರೈತ ಮಲ್ಲನಗೌಡ ಮಹಾದೇವ ಬಿರಾದಾರ ಅವರ ಹೋರಿಗೆ ಬಹು ಬೇಡಿಕೆ ಬಂದಿದ್ದು ಎರಡೂವರೆ ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ನಾಲ್ಕು ಹಲ್ಲಿನ ಹೋರಿಯಾಗಿದ್ದು ತುಂಬಾ ವಿಶೇಷವಾಗಿದೆ. ಮರಿ ಹೋರಿ ಹುಟ್ಟಿ ನಾಲ್ಕು ಹಲ್ಲು ಬರುವುದರೊಳಗೆ ಮಹಾರಾಷ್ಟ್ರದ ರೈತರಿಂದ ಬಹು ಬೇಡಿಕೆ ಬಂದಿತ್ತು.
ಇದನ್ನು ಮುಧೋಳ ತಾಲೂಕಿನ ಮಹಾಲಿಂಗಪುರ ಗ್ರಾಮದ ಸುರೇಶ ನಂದಗಾಂವ ಅವರು ಎರಡುವರೆ ಲಕ್ಷಕ್ಕೆ ಕೊಂಡೊಯ್ದರು. ಇದರಿಂದ ಗ್ರಾಮದ ಎಲ್ಲ ರೈತರು, ಯುವಕರು ಮಲ್ಲನಗೌಡ ಬಿರಾದಾರ ಅವರ ಹೋರಿಯನ್ನು ಮೆರವಣಿಗೆ ಮೂಲಕ ಬೀಳ್ಕೊಟ್ಟರು.