ವಿಜಯಪುರ: ಆನ್ಲೈನ್ ಪಾರ್ಟ್ ಟೈಮ್ನಲ್ಲಿ ಕಮಿಷನ್ ನೀಡುವ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಹಂಗರಗಿ ಗ್ರಾಮದಲ್ಲಿ ನಡೆದಿದೆ.
ಮಲ್ಲಿಕಾರ್ಜುನ ರಾಮು ಮಸೂತಿ ಮೋಸ ಹೋದವರು. ಇನ್ನು ಟೆಲಿಗ್ರಾಂನಲ್ಲಿ ಆನ್ಲೈನ್ ಟೈಮ್ ಜಾಬ್ ಮಾಡಿ 15% ಕಮಿಷನ್ ಮೇಲೆ ಹಣ ಪಡೆದುಕೊಳ್ಳುವಂತೆ ಆಮಿಷ ನೀಡಿದ್ದಾರೆ. ಇದನ್ನು ನಂಬಿ 2,33, 889 ನಗದು ಪಡೆದುಕೊಂಡು ಪಂಗನಾಮ ಹಾಕಿದ್ದಾರೆ. ಅದಕ್ಕಾಗಿ ಮೋಸ ಹೋಗಿರುವ ಮಲ್ಲಿಕಾರ್ಜುನ ದೂರು ದಾಖಲು ಮಾಡಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.