ವಿಜಯಪುರ: ವಿಜಯಪುರ ಉಪವಿಭಾಗದ ಡಿವೈಎಸ್ಪಿಯಾಗಿ ಸಿದ್ದೇಶ್ವರ ಅವರು ಅಧಿಕಾರ ಸ್ವೀಕರಿಸಿದರು.
ಈ ಮುಂಚೆ ಡಿವೈಎಸ್ಪಿಯಾಗಿದ್ದ ಲಕ್ಷ್ಮೀನಾರಾಯಣ ಕೆ.ಸಿ ರವರು ಸಿಐಡಿ’ಗೆ ವರ್ಗಾವಣೆಗೊಂಡಿದ್ದು, ಲೋಕಾಯುಕ್ತ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಿದ್ದೇಶ್ವರ ಅವರು ವಿಜಯಪುರ ಉಪವಿಭಾಗದ ಡಿವೈಎಸ್ಪಿ’ಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸಿದ್ದೇಶ್ವರ’ರವರು ಡಿವೈಎಸ್ಪಿಯಾಗಿ ಬಡ್ತಿ ಹೊಂದುವುದಕ್ಕೂ ಮುನ್ನ ಜಿಲ್ಲೆಯಲ್ಲಿ ಪಿಎಸ್ಐ ಹಾಗೂ ಸಿಪಿಆಯ್ ಆಗಿ ಸಹ ಸೇವೆ ಸಲ್ಲಿಸಿದ್ದಾರೆ.
ಇಂದು ಜಿಲ್ಲೆಯ ವಿಜಯಪುರ ಡಿವೈಎಸ್ಪಿಯಾಗಿ ಅಧಿಕಾರ ಸ್ವೀಕಾರಕ್ಕೂ ಮುನ್ನ ಎಸ್ಪಿ ಎಚ್.ಡಿ.ಆನಂದಕುಮಾರ್ ಅವರನ್ನ ಭೇಟಿಯಾದ ಅವರನ್ನ ಎಸ್ಪಿ’ರವರು ಹೂಗುಚ್ಚ ನೀಡಿ ಜಿಲ್ಲೆಗೆ ಸ್ವಾಗತಿಸಿದ್ದಾರೆ.