ವಿಜಯಪುರ: ಮಳೆಗಾಗಿ ಜನರು ಪೂಜೆ ಹೋಮ ಹವನ ಮಾಡೋದನ್ನ ನೋಡಿದ್ದಿರಾ. ಆದ್ರೇ, ವಿಜಯಪುರ ಜಿಲ್ಲೆಯಲ್ಲಿ ಮಳೆಗಾಗಿ ವಿಚಿತ್ರ ಆಚರಣೆ ಮಾಡಿದ್ದಾರೆ.
ಮಳೆಗಾಗಿ ಶವದ ಬಾಯಿಗೆ ಗ್ರಾಮಸ್ಥರು ನೀರು ಹಾಕಿ ಮಳೆಗಾಗಿ ವಿಚಿತ್ರವಾಗಿ ಆಚರಣೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ.
ಗೋರಿಯಲ್ಲಿ ಹೂತಿದ್ದ ಶವದ ಬಾಯಿಗೆ ಪೈಪ್ ಮೂಲಕ ಬಾಯಿಗೆ ನೀರು ಹಾಕಿ ಮಳೆಗಾಗಿ ಆಚರಣೆ ಮಾಡಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ಮಳೆಯಾಗದ ಕಾರಣ ರೈತಾಪಿ ವರ್ಗ ಆತಂಕಗೊಂಡಿದ್ದಾರೆ.
ಅದಕ್ಕಾಗಿ ಶವದ ಬಾಯಿಗೆ ನೀರು ಹಾಕಿದರೆ ಮಳೆ ಬರುತ್ತೇ ಅನ್ನೋ ನಂಬಿಕೆ ಗ್ರಾಮಸ್ಥರಲ್ಲಿ ಇದೆ. ಹೀಗಾಗಿ ಗೋರಿಯಲ್ಲಿದ್ದ ಶವದ ಬಾಯಿಗೆ ಟ್ಯಾಂಕರ್ ಮೂಲಕ ನೀರು ತಂದು ಹಾಕಿದ್ದಾರೆ.