ವಿಜಯಪುರ: ಕೋಪ.. ಕ್ಷುಲ್ಲಕ ಕಾರಣ ಸೇರಿದಂತೆ ವಿವಿಧ ಕಾರಣಕ್ಕೆ ಕ್ಷಣಾರ್ಧದಲ್ಲಿ ಕೊಲೆ ಪ್ರಯತ್ನ ಸೇರಿದಂತೆ ಸಣ್ಣಪುಟ್ಟ ಅಪರಾಧ ಕೃತ್ಯವೆಸಗಿ ಶಿಕ್ಷೆಯನ್ನು ಅನುಭವಿಸುತ್ತಿದ್ದ 10 ಕೈದಿಗಳಿಗೆ ಸ್ವಾತಂತ್ರ ಮಹೋತ್ಸವ ಹಿನ್ನಲೆಯಲ್ಲಿ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು. ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ 10 ಜನ ಕೈದಿಗಳನ್ನು ಬಿಡುಗಡೆಪತ್ರ ನೀಡಿ ಮುಂದಿನ ಜೀವನವನ್ನು ಸರಿಯಾಗಿ ರೂಪಿಸಿಕೊಳ್ಳಿ ಎಂದು ಬಿಡುಗಡೆಯಾಯಿತು.
ಜಿಲ್ಲಾ ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ.ಐ.ಜಿ. ಮ್ಯಾಗೇರಿ ಅವರಿಗೆ ಬಿಡುಗಡೆ ಆದೇಶ ಪತ್ರ ವಿತರಿಸಿದರು. ಬಿಡುಗಡೆಯಾಗಿ ಹೊರಬಂದ ತಕ್ಷಣವೇ ವೃದ್ಧನೋರ್ವ ತನ್ನ ಮೊಮ್ಮಗನನ್ನು ಎತ್ತಿಕೊಂಡು ಮುದ್ದಾಡಿದರೆ, ಇನ್ನೂ ಕೆಲವರು ಕುಟುಂಬ ಸದಸ್ಯರನ್ನು ಆಲಿಂಗನ ಮಾಡಿಕೊಂಡು ಕಣ್ಣೀರು ಸುರಿಸಿದರು.
ಅಲ್ಲದೇ, ಸಣ್ಣ ಜಗಳದಿಂದಾಗಿ ನಾನು ಜೈಲು ಸೇರಬೇಕಾಯಿತು, ಮೂರು ವರ್ಷಗಳಿಂದ ಇಲ್ಲಿದ್ದೆ, ಈಗ ನೆಮ್ಮದಿಯಾಗಿ ಸಂತೋಷದಿಂದ ಬದುಕುವೆ. ಈಗ ಬಿಡುಗಡೆಯಾಗುತ್ತಿರುವುದು ಸಂತೋಷ ತಂದಿದೆ ಎಂದು ಸಿದ್ಧಪ್ಪ ತಮ್ಮ ಸಂತೋಷ ಹಂಚಿಕೊಂಡರು.
*ಬಿಡುಗಡೆಗೊಂಡ ದಶ ಜೈಲು ಹಕ್ಕಿಗಳು*
ಬಸಪ್ಪ ಮಲಕಾರಿ ಜಟಗೊಂಡ, ಗೌಡಪ್ಪ ಮಲಕಾರಿ ಜಟಗೊಂಡ, ಬಿಳೆನ್ನಿ ಮಲಕಾರಿ ಜಟಗೊಂಡ, ಮಲಕಾರಿ ಅಮಸಿದ್ಧ ಜಟಗೊಂಡ, ಸಿದ್ಧಪ್ಪ ಸಂಗಪ್ಪ ಮಾದರ, ಕಾಡಪ್ಪ ಚಂದಪ್ಪ ಮಾದರ, ಅಪ್ಪು ಬಸಯ್ಯ ಹಿರೇಮಠ, ಮಾಯಪ್ಪ ನಾಗಪ್ಪ ವಾಡೇದ, ಉಮಾ ನೇಮಪ್ಪ ಚವ್ಹಾಣ, ಮುತ್ತವ್ವ ಲಕ್ಷ್ಮಣ ನಾಗವ್ವಗೋಳ ಬಿಡುಗಡೆ ಆಗಿದ್ದಾರೆ.