K1N ಡೆಸ್ಕ್: ಮೊದಲಿಗೆ ಭಾರತ ದೇಶವೆಂದರೆ ಎಲ್ಲ ದೇಶದವರು ಮೂಗು ಮುರಿಯುತ್ತಿದ್ದರು. ಆದರೆ ಸದ್ಯ ಭಾರತ ದೇಶದ ಹೆಸರು ಕೇಳಿದರೆ ತಲೆ ಎತ್ತಿ ತಿರುಗಿ ನೋಡುತ್ತಿದ್ದಾರೆ.
ಹೌದು…! ಭಾರತ ದೇಶದ ಕೀರ್ತಿ ಜಗದಗಲ ಹರಡುವಂತೆ ಮಾಡಿದ ಕೀರ್ತಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರಿಗೆ ಸಲ್ಲಿಸುತ್ತದೆ. ನರೇಂದ್ರ ಮೋದಿಯವರು ಭಾರತದ ಹೆಸರನ್ನು ವಿಶ್ವಕ್ಕೆ ಪಸರಿಸಿದ ಆ ಮಹಾನುಭಾವರು… ಎಂಟೆದೆಯ ಭಂಟ. ದೇಶ ರಕ್ಷಕ… ಅಪ್ಪಟ ದೇಶ ಪ್ರೇಮಿ… ಎದುರಾಳಿದಾರರಿಗೆ ಸರಿಯಾದ ತಕ್ಕಪಾಠವನ್ನು ಸರಿಯಾದ ವೇಳೆ ತಿಳಿಸುವಲ್ಲಿ ಸಮರ್ಥರಾಗಿದ್ದಾರೆ.
ಪ್ರಧಾನಮಂತ್ರಿಯಾಗಿ ತಮ್ಮ ಎರಡನೇ ಅವಧಿಯ ಆರಂಭದ ಸಂಕೇತವಾಗಿ ಮೇ 30, 2019 ರಂದು ಶ್ರೀ ನರೇಂದ್ರ ಮೋದಿ ಅವರು ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ ಜನ್ಮ ಪಡೆದ ಮೊದಲ ಪ್ರಧಾನಮಂತ್ರಿ ಶ್ರೀ ಮೋದಿ ಅವರಾಗಿದ್ದಾರೆ. ಕ್ರಿಯಾಶೀಲ, ಸಮರ್ಪಿತ ಮತ್ತು ನಿರ್ದಿಷ್ಟ, ಅವರು ಒಂದು ಶತಕೋಟಿಗೂ ಅಧಿಕ ಭಾರತೀಯರ ಆಶೋತ್ತರ ಮತ್ತು ಭರವಸೆಗಳನ್ನು ಪ್ರತಿಬಿಂಬಿಸುತ್ತಾರೆ.
ದೇಶದ ಅರ್ಥಿಕವ್ಯವಸ್ಥೆಯಲ್ಲಿ ಜನಸಾಮಾನ್ಯನೂ ಸೇರ್ಪಡೆಗೊಂಡು ನೇರವಾಗಿ ಪಾಲ್ಗೊಳ್ಳುವಂತೆ ಮಾಡಿದ “ಪ್ರಧಾನ ಮಂತ್ರಿ ಜನ್ ಧನ್ ಯೋಜನಾ” ದೇಶದ ಅರ್ಥ ವ್ಯವಸ್ಥೆ ಬದಲಾವಣೆಯ ನೂತನ ಮೈಲುಗಲ್ಲಾಗಿದೆ. ದೇಶದಲ್ಲಿ ಕೈಗಾರಿಕಾ ಕ್ರಾಂತಿಯಾಗಲು “ ಮೇಕ್ ಇನ್ ಇಂಡಿಯ” ಯೋಜನೆ ಮೂಲಕ ಸುಲಭವಾಗಿ ವ್ಯವಹಾರ ನಡೆಸಲು ಸಾಧ್ಯವಾಗುವಂತಹ ಉತ್ತಮ ವಾಣಿಜ್ಯ ವಾತಾವರಣ ಕಲ್ಪಿಸಿಕೊಡುತ್ತೇವೆ ಎನ್ನುವುದು ವಿದೇಶಿ ಹೂಡಿಕೆದಾರರಿಗೆ ಹಾಗೂ ಉದ್ಯಮಿಗಳಿಗೆ ನೀಡಿದ ಆಹ್ವಾನ ಅತ್ಯಂತ ಯಶಸ್ವಿಯಾಯಿತು. ಕಾರ್ಮಿಕ ನೀತಿ ಸುಧಾರಣೆ ಹಾಗೂ ಕಾರ್ಮಿಕ ಘನತೆ ಹೆಚ್ಚಿಸಿದ್ದಾರೆ.
ದೇಶದಾಧ್ಯಂತ ಸ್ವಚ್ಛತೆಯ ಕ್ರಾಂತಿ ಮೂಡಿಸುವ ಸಾಮೂಹಿಕ ಜನಾಂದೋಲನದ ಉದ್ದೇಶದಿಂದ “ಸ್ವಚ್ಛ ಭಾರತ್ ಮಿಷನ್” ಯೋಜನೆಯನ್ನು ಮಹಾತ್ಮ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2, 2014ರಂದು ಪ್ರಾರಂಭಿಸಿದರು. ಜನಮನಗೆದ್ದ ಈ ಪರಿಣಾಮಕಾರಿ ಯೋಜನೆಯ ವಿಸ್ತಾರ ಹಾಗೂ ಪ್ರಭಾವ ಅಮೂಲ್ಯವಾದುದು ವಾದುದು ಹಾಗೂ ಇದು ಐತಿಹಾಸಿಕ ಆಂದೋಲನವಾಗಿ ಗುರುತಿಸಲ್ಪಟ್ಟಿತು.
ವಿಶ್ವದ ಅತಿದೊಡ್ಡ ಪ್ರಜಾತಾಂತ್ರಿಕ ದೇಶಕ್ಕೆ ಜಾಗತಿಕವಾಗಿ ಅತ್ಯುನ್ನತ ಸ್ಥಾನಮಾನವಿದೆ ಎಂದು ಗುರುತಿಸಿಕೊಳ್ಳಲು, ಪ್ರಧಾನ ಮಂತ್ರಿ ಮೋದಿಯವರ ಅತ್ಯಂತ ಸಧೃಡ ಹಾಗೂ ಬಲಿಷ್ಠ “ವಿದೇಶಾಂಗ ನೀತಿಗಳು” ಕಾರಣವಾದವು. “ಸಾರ್ಕ್ (Sಂಂಖಅ)” ದೇಶಗಳ ಮುಖ್ಯಸ್ಥರ ಸಮ್ಮುಖದಲ್ಲೇ ಅವರು ಪ್ರಪ್ರಥಮವಾಗಿ ತಮ್ಮ ಕಚೇರಿ ಕೆಲಸಗಳನ್ನು ಪ್ರಾರಂಭಿಸಿದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇವರು ಮಾಡಿದ ಭಾಷಣಕ್ಕೆ ವಿಶ್ವದಾಧ್ಯಂತ ಎಲ್ಲಡೆಯಿಂದ ಪ್ರಶಂಸೆಯ ಮಹಾಪೂರವೇ ಹರಿದು ಬಂತು. ಹಲವು ದೇಶಗಳ ದ್ವಿಪಕ್ಷೀಯ ಸಂದರ್ಶನ ನಡೆಸಿದ ಭಾರತದ ಮೊಟ್ಟಮೊದಲ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಾಗಿದ್ದಾರೆ, ಅಲ್ಲದೆ ಇದೊಂದು ಐತಿಹಾಸಿಕ ದಾಖಲೆ ಕೂಡಾ ಆಗಿದೆ. ಇವುಗಳಲ್ಲಿ 17 ವರ್ಷಗಳ ನಂತರ ನೇಪಾಳ, 28 ವರ್ಷಗಳ ನಂತರ ಆಸ್ಟ್ರೇಲಿಯ, 31 ವರ್ಷಗಳ ನಂತರ ಫಿಜಿ, 34 ವರ್ಷಗಳ ನಂತರ ಸೆಚೆಲೆಸ್ ಮೊದಲಾದ ದೇಶಗಳ ದ್ವಿಪಕ್ಷೀಯ ಸಂದರ್ಶನ ಸೇರಿವೆ. ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ, ಪ್ರಧಾನಿ ಮೋದಿಯವರು, ವಿಶ್ವ ಸಂಸ್ಥೆ, ಬ್ರಿಕ್ಸ್, ಸಾರ್ಕ್, ಮತ್ತು ಜಿ-20 ಶೃಂಗಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ಈ ಶೃಂಗಸಭೆಗಳಲ್ಲಿ ಜಾಗತಿಕ ಆರ್ಥಿಕ ಮತ್ತು ರಾಜಕೀಯ ವಿದ್ಯಮಾನಗಳು, ಜಲ್ವಂತ ಸಮಸ್ಯೆಗಳಲ್ಲಿ ಭಾರತದ ಮಧ್ಯಪ್ರವೇಶ ಹಾಗೂ ಅಭಿಪ್ರಾಯ ವ್ಯಕ್ತಪಡಿಸುವಿಕೆಗೆ ವಿಶ್ವದಾಧ್ಯಂತ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಶ್ರೀ ಮೋದಿಯವರ ಜಪಾನ್ ಭೇಟಿ ಭಾರತ ಹಾಗೂ ಜಪಾನ್ ದೇಶಗಳ ಸಂಬಂಧಗಳ ಅಧ್ಯಾಯಲ್ಲೊಂದು ಹೊಸಪುಟವನ್ನೇ ತೆರೆಯಿತು. ಮಂಗೋಲಿಯಾ ದೇಶಕ್ಕೆ ಭೇಟಿ ಭಾರತದ ಮೊದಲ ಪ್ರಧಾನಮಂತ್ರಿ ಅವರು. ಅವರ ಚೀನಾ ಹಾಗೂ ದಕ್ಷಿಣ ಕೊರಿಯ ಭೇಟಿ ಯಶಸ್ಸು ಕಂಡಿದೆಯಲ್ಲದೆ, ಬಂಡವಾಳ ಹೂಡಿಕೆ ಸೆಳೆಯುವಲ್ಲಿ ಸಾಕಷ್ಟು ಪ್ರಯೋಜನವಾಗಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಯುರೋಪ್ ದೇಶಗಳ ಸಂಬಂಧ ಸುಧಾರಣಾ ಪ್ರಯತ್ನ ಫ್ರಾನ್ಸ್ ಹಾಗೂ ಜರ್ಮನಿ ಭೇಟಿವೇಳೆ ಸ್ಪಷ್ಟವಾಗಿ ಗೋಚರಿಸಿತು.
ವಿಶ್ವ ಮಟ್ಟದಲ್ಲಿ ಒಂದು ದಿನವನ್ನು “ಅಂತಾರಾಷ್ಟ್ರೀಯ ಯೋಗ ದಿನ”ವಾಗಿ ಆಚರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೀಡಿದ್ದ ಕರೆಗೆ ವಿಶ್ವಸಂಸ್ಥೆಗೆ ಸಕಾರಾತ್ಮಕ ಸ್ಪಂದನೆಗಳು ಪ್ರವಾಹೋಪಾದಿಯಲ್ಲಿ ಬಂದವು. ಪ್ರಧಾನ ಮಂತ್ರಿಯವರ ಮನವಿಗೆ ಓಗೊಟ್ಟು ಜಗತ್ತಿನ ಉದ್ದಗಲದ ಒಟ್ಟು 177 ದೇಶಗಳು ಒಂದಾದವು, ಜೂನ್ 21 ನ್ನು ಇನ್ನು ಮುಂದೆ ಪ್ರತಿ ವರ್ಷವೂ “ವಿಶ್ವಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನ” ವೆಂದು ಘೋಷಿಸಿ ವಿಶ್ವದಾಧ್ಯಂತ ಆಚರಿಸಲು ತೀರ್ಮಾನ ಕೈಗೊಳ್ಳಲಾಯಿತು.
ಶ್ರೀ ನರೇಂದ್ರ ಮೋದಿಯವರು “ಜನತೆಯ ನಾಯಕ”. ಜನಸಾಮಾನ್ಯರ ಕ್ಷೇಮಕ್ಕಾಗಿ ಜೀವನವನ್ನು ಮುಡಿಪಾಗಿಟ್ಟವರು. ಬಡಜನತೆಯ ಕಷ್ಟಕಾರ್ಪಣ್ಯ ನಿವಾರಣೆಗೆ, ಸಮಸ್ಯೆಗಳ ಪರಿಹಾರಕ್ಕಾಗಿ ಜೀವನವನ್ನು ಸಮರ್ಪಿಸಿಕೊಂಡವರು. ಜನರ ಜೊತೆ ಬೆರೆವ, ಅವರ ಜೀವನಾನುಭವ ಹಂಚಿಕೊಳ್ಳುವ ವ್ಯಕ್ತಿತ್ವ. ಜನರ ನೋವು, ನಲಿವು, ಸುಖ ದುಃಖಗಳಲ್ಲಿ ಪಾಲುದಾರರಾಗುವುದಕ್ಕಿಂತ ಹೆಚ್ಚಿದ ಏನನ್ನೂ ಅವರು ಬಯಸಿಲ್ಲ. ಅಂತರ್ಜಾಲ ಮೂಲಕ ತನ್ನ ಬಲಿಷ್ಠವಾದ ಪ್ರಭಾವ ಬೆಳೆಸಿಕೊಂಡ ಅವರು ಜನರ ಜೊತೆ “ನೇರ ಖಾಸಗಿ ಸಂಪರ್ಕ” ಇಟ್ಟುಕೊಳ್ಳಲು ಈ ಆಧುನಿಕ ಸೌಲಭ್ಯ ಅನುಕೂಲ ಮಾಡಿಕೊಟ್ಟಿತು. ದೇಶದ ಅತ್ಯಂತ “ಟೆಕ್ನೋ ಸೇವಿ” ನಾಯಕ ಎಂದೇ ಅವರನ್ನು ಗುರುತಿಸಲಾಗುತ್ತಿದೆ. ಜನರ ಜೀವನದಲ್ಲಿ ಬದಲಾವಣೆ ತರಲು, ದೇಶದಾದ್ಯಂತ ಜನರನ್ನು ನೇರವಾಗಿ ಸಂಪರ್ಕಿಸಲು ಇವರು “ವೆಬ್” ಬಳಸುತ್ತಾರೆ. ಫೇಸ್ ಬುಕ್, ಟ್ವೀಟರ್, ಗೂಗ್ಲ್ +, ಇನಸ್ಟಾಗ್ರಾಮ್, ಸೌಂಡ್ ಕ್ಲೌಡ್, ಲಿಂಕೆಡಿನ್, ವೈಬೊ ಮತ್ತು ಇತರ ಸಾಮಾಜಿಕ ಜಾಲತಾಣಗಳ ವೇದಿಕೆಗಳಲ್ಲಿ ಅವರು ಸಕ್ರಿಯರಾಗಿದ್ದಾರೆ. ಮೋದಿಯವರು ದೇಶ ಕಂಡ ಅಪ್ರತಿಮ ಪ್ರಧಾನಿಯಾಗಿದ್ದಾರೆ. ಭಾರತ ದೇಶವು ವಿಶ್ವಗುರುವಾಗುವ ಕಾಲ ದೂರವಿಲ್ಲ. ಇಂದು ಜನ್ಮ ದಿನ ಆಚರಿಸಿಕೊಳ್ಳುತ್ತಿರುವು ಹೆಮ್ಮೆಯ ಪ್ರಧಾನಿಯವರಿಗೆ ಜನ್ಮ ದಿನದ ಶುಭಾಶಯ.
ವಿಜಯ ಜೋಶಿ
ಭಾಜಪ ಮಾಧ್ಯಮ ಪ್ರಮುಖರು, ವಿಜಯಪುರ