ವಿಜಯಪುರ: ಬಸವನಾಡಿನಲ್ಲಿ ವಿಚಿತ್ರ ಹಬ್ಬದ ಆಚರಣೆ ಮಾಡಲಾಗುತ್ತದೆ. ಭಕ್ತರು ಓಡೋಡಿ ಬಂದು ಕಲ್ಲಿಗೆ ಜೋರಾಗಿ ತಲೆಜಚ್ಚಿ ದೇವರಿಗೆ ನಮಸ್ಕಾರ ಮಾಡುವ ದೃಶ್ಯ ನೋಡುವರಿಗೆ ದಿಗ್ಭ್ರಮೆ ಮೂಡಿಸುವಂತಾಗಿದೆ.
ಹೌದು..! ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಗಣಿ ಗ್ರಾಮದಲ್ಲಿ ಸೋಮೇಶ್ವರ ದೇವರ ಜಾತ್ರೆ ವೇಳೆ ಈ ತರಹ ಆಚರಣೆ ನಡೆಯುತ್ತದೆ.
ಓಡೋಡಿ ಬಂದು ಭಕ್ತರು ದೊಡ್ಡ ಕಲ್ಲಿಗೆ ತಲೆ ಜಚ್ಚಿಕೊಳ್ಳುತ್ತಾರೆ. ಒಟ್ಟು ಮೂರು ಸಲ ತಲೆಯನ್ನು ಕಲ್ಲಿಗೆ ನಮಸ್ಕಾರ ಮಾಡುತ್ತಾರೆ. ನೂರಾರು ಜನರಿಂದ ನಡೆಯುವ ಈ ವಿಶಿಷ್ಟ ಆಚರಣೆಯಲ್ಲಿ ಕಲ್ಲಿಗೆ ಎಷ್ಟೇ ಜೋರಾಗಿ ತಲೆಜಜ್ಜಿಕೊಂಡರು ಯಾರಿಗೂ ಗಾಯವಾಗಿಲ್ಲ. ಇದು ಸೋಮೇಶ್ವರ ದೇವರ ಶಕ್ತಿಯಿಂದ ಯಾವುದೇ ಅಪಾಯ ಆಗುವುದಿಲ್ಲ ಎಂದ ಭಕ್ತರು ನಂಬಿಕೆ ಆಗಿದೆ. ಇದು
ಕಾರ್ತಿಕ ಮಾಸದ ಬಳಿಕ ನಡೆಯುವ ವಿಶಿಷ್ಟ ಆಚರಣೆ ಆಗಿದೆ.