ವಿಜಯಪುರ: ಮಗನ ಸಾವಿನ ಸುದ್ದಿ ಕೇಳಿದ ಒಂದು ಗಂಟೆಯಲ್ಲಿ ತಾಯಿ ಹೃದಯಾಘಾತದಿಂದ ಅಸುನೀಗಿರುವ ಘಟನೆ ಬುಧವಾರ ಭೀಮೆಯಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಶರಣಪ್ಪ ಚನ್ನಮಲ್ಲಪ್ಪ ರೂಗಿ (48) ಅನಾರೋಗ್ಯದಿಂದ ನಿಧನರಾಗಿದ್ದರು. ಇನ್ನೂ
ಮಗನ ಸಾವಿನ ಸುದ್ದಿ ತಿಳಿದು ತಾಯಿ ಸುಗಲಾಬಾಯಿ ಚನ್ನಮಲ್ಲಪ್ಪ ರೂಗಿ (65) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇನ್ನು ತಾಯಿ ಮಗನ ಸಾವಿನ ಸುದ್ದಿ ಹಿನ್ನೆಲೆ
ತಡವಲಗಾ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದೆ.