K1N ಡೆಸ್ಕ್: ಮ್ಯಾಂಚೆಸ್ಟರ್ ಕ್ಲಬ್ ತೊರೆದಿರುವ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ಅವರೊಂದಿಗೆ, $225 ಮಿಲಿಯನ್ (ಸುಮಾರು 1838 ಕೋಟಿ ರೂ.) ಮೊತ್ತದ ಒಪ್ಪಂದ ಮಾಡಿಕೊಳ್ಳಲು ಸೌದಿ ಅರೇಬಿಯಾದ ಫುಟ್ಬಾಲ್ ಕ್ಲಬ್ ‘ಅಲ್ ನಾಸರ್’ ಮುಂದೆ ಬಂದಿದೆ ಎಂದು ವರದಿಯಾಗಿದೆ.
37 ವರ್ಷದ ರೊನಾಲ್ಡೊ ಅವರನ್ನು, ಸದ್ಯ ನಡೆಯುತ್ತಿರುವ ಫಿಫಾ ವಿಶ್ವಕಪ್ ಪಂದ್ಯಾವಳಿ ಬಳಿಕ, ಮೂರು ವರ್ಷದ ಮಟ್ಟಿಗೆ ಇಷ್ಟು ದೊಡ್ಡ ಮೊತ್ತ ನೀಡಿ ತನ್ನ ಪರ ಆಡಲು ಅಲ್ ನಾಸರ್ ಉತ್ಸಾಹ ತೋರಿದೆ.
ಅಲ್ ನಾಸರ್ ಏಷ್ಯಾದ ಯಶಸ್ವಿ ಫುಟ್ಬಾಲ್ ಕ್ಲಬ್ ಆಗಿ ಗುರುತಿಸಿಕೊಂಡಿದ್ದು, ಒಂಬತ್ತು ಲೀಗ್ಗಳಲ್ಲಿ ಪ್ರಶಸ್ತಿ ಬಾಚಿದೆ.