ವಿಜಯಪುರ: ವಿಶ್ವ ವಿಖ್ಯಾತ ಗೋಳಗುಮ್ಮಟ ಚಿನ್ನ ರೀತಿಯಲ್ಲಿ ದೀಪದಲ್ಲಿ ಮಿಂಚುತ್ತಿದೆ. ಎಲ್ಲಿ ನೋಡಿದರು ಬಂಗಾರದಂತೆ ಹೊಳೆಯುತ್ತಿದೆ. ಪ್ರವಾಸಿಗರು, ಸ್ಥಳೀಯರಿಗೆ ಕಣ್ಮನ ಸೆಳೆಯುತ್ತಿದೆ.
ಅಂತಾರಾಷ್ಟ್ರೀಯ ಆರ್ಥಿಕ ಸಹಕಾರದ ಪ್ರಧಾನ ವೇದಿಕೆಯಾದ ಜಿ20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಗುರುವಾರದಿಂದ ಭಾರತ ಅಧಿಕೃತವಾಗಿ ವಹಿಸಿಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳೂ ಸೇರಿದಂತೆ ಜಿ20 ಲಾಂಛನವನ್ನು ಹೊಂದಿರುವಂತೆ ದೇಶದ 100 ಸ್ಮಾರಕಗಳು ಡಿಸೆಂಬರ್ 1 ರಿಂದ 7 ರವರೆಗೆ ದೀಪಾಲಂಕಾರದಿಂದ ನೋಡಬಹುದಾಗಿದೆ.