ಕಲಬುರಗಿ: ಜಮೀನಿನಲ್ಲಿ ಮಲಗಿದ್ದ ಮಹಿಳೆ ಮೇಲೆ ಎಡೆ ಎತ್ತಿ ನಾಗರ ಹಾವು ಕುಳಿತುಕೊಂಡಿರುವ ಘಟನೆ ಕಲಬುರಗಿಯ ಮಲ್ಲಾಬಾದ್ ಗ್ರಾಮದಲ್ಲಿ ನಡೆದಿದೆ.
ಭಾಗಮ್ಮ ಬಡದಾಳ್ ಎಂಬುವರ ಜಮೀನಿನಲ್ಲಿ ಘಟನೆ ನಡೆದಿದ್ದು, ತಮ್ಮ ಜಮೀನಿನಲ್ಲಿ ಮಲಗಿದ್ದ ಭಾಗಮ್ಮ ಮೇಲೆ ಹಾವು ಬಂದಿದ್ದನ್ನು ನೋಡಿ ಭಯಗೊಂಡಿದ್ದಾರೆ. ಕಾಪಾಡು ಶ್ರೀಶೈಲ ಮಲ್ಲಯ್ಯ ಅಂತಾ ಪ್ರಾರ್ಥಿಸಿದ್ದಾರೆ. ಕೆಲಹೊತ್ತಿನ ನಂತರ ನಾಗರಹಾವು ಸ್ಥಳದಿಂದ ಕಾಲ್ಕಿತ್ತಿದೆ. ನಾಗರಹಾವು ಹೆಡೆ ಎತ್ತಿ ಕುಳಿತ್ತಿದ್ದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.