ಶಿವಮೊಗ್ಗ: ಮದುವೆ ಆಗಲೂ ನನಗೆ ಹುಡುಗಿ ಸಿಗ್ತಾ ಇಲ್ಲ. ಹುಡುಗಿ ಹುಡುಕಿ ಕೊಡಿಸಿ ನನಗೆ ಮದುವೆ ಆಗೋಕೆ ಆಸೆ ಇದೆ ಎಂದು ಶಿವಮೊಗ್ಗ ಎಸ್ಪಿಗೆ ವಿಭಿನ್ನವಾಗಿ ರಿಕ್ವೆಸ್ಟ್ ಲೇಟರ್ ಬಂದಿದೆ. ಯುವಕನೊಬ್ಬ ಎಸ್ಪಿ ಲಕ್ಷ್ಮಿ ಪ್ರಸಾದ್ಗೆ ಪತ್ರ ಬರೆದಿದ್ದಾನೆ.
ಭದ್ರಾವತಿ ಮೂಲದ ಪ್ರವೀಣ್ ಎಂಬಾತ ಪತ್ರ ಬರೆದಿದ್ದು, ಯುವಕನು ಪತ್ರದಲ್ಲಿ ತನ್ನದೇ ಜಾತಿಯ ಹುಡುಗಿ ಹುಡುಕಿಕೊಡಿ. ನಾನು ಭದ್ರಾವತಿ ನಗರದಲ್ಲಿ ಜನಿಸಿರುತ್ತೇನೆ. ನನಗೆ ತಂದೆ ಇಲ್ಲ, ಅಣ್ಣ ಮದುವೆ ಆಗಿದೆ. ಅವನು ತಮ್ಮ ಪಾಡಿಗೆ ಅವನಿದ್ದಾನೆ. ಬೆಂಗಳೂರಿನ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡಿದ್ದೇನೆ. ಕೆಲಸ ಬಿಟ್ಟು ಊರಲ್ಲಿ ವ್ಯವಸಾಯ ಮಾಡಿಕೊಂಡಿದ್ದೇನೆ. ನನಗೆ ಮದುವೆ ವಯಸ್ಸು ಮೀರಿ ಹೋಗ್ತಾ ಇದೆ. ಎಷ್ಟೇ ಹುಡುಕಿದ್ರೂ ನನ್ನ ಜಾತಿಯ ಹುಡುಗಿ ಸಿಗುತ್ತಿಲ್ಲ. ಪ್ಲೀಸ್ ನನಗೊಂದು ಜೋಡಿ ಹುಡುಕೊಡಿ ಸಾರ್ ಎಂದು ಬರೆದಿದ್ದಾನೆ. ಇದೀಗ್ ಈ ಲೇಟರ್ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ…