ವಿಜಯಪುರ: ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಹಗಲು ಕನಸು ಕಾಣುತ್ತಿದ್ದಾರೆ ಎಂದು ಕುಡಚಿ ಶಾಸಕ ಪಿ. ರಾಜೀವ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಇಬ್ಬರು ಹಗಲು ಕನಸು ಕಾಣುತ್ತಾ ಒಬ್ಬರು ಕಾಲು ಒಬ್ಬರು ಎಳೆಯುತ್ತಾ ಅಲ್ಲಿಯೇ ಬಿದ್ದಿದ್ದಾರೆ. ಆದ್ರೇ, ನಾಲ್ಕು ಹೆಚ್ಚು ಮುಂದೇ ಬಂದು ರಾಜ್ಯದ ಅಭಿವೃದ್ಧಿಯ ಕುರಿತು ಚರ್ಚೆ ಮಾಡಬೇಕು ಎಂದು ಕಿವಿಮಾತು ಹೇಳಿದರು. ಡಿಕೆಶಿ ದೂರದೃಷ್ಟಿ ಇಲ್ಲದೇ ಬಾಲಿಶ ಹೇಳಿಕೆ ನೀಡಿತ್ತಾರೆ ಎಂದು ಡಿಕೆಶಿ ವಿರುದ್ಧ ಗುಡುಗಿದರು. ಡಿಕೆಶಿ, ಸಿದ್ದರಾಮಯ್ಯ ಮುಸುಕಿನ ಗುದ್ದಾಟಕ್ಕೆ ಕಾಂಗ್ರೆಸ್ ಹಡಗು ಮುಳುಗುತ್ತಿದೆ ಎಂದರು.