ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಕಂಟ್ರಿ ಪಿಸ್ತೂಲ್ ಗಳು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದರು. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ಸೇರಿದಂತೆ ವಿವಿಧ ಪೊಲೀಸ ಠಾಣಾ ವ್ಯಾಪ್ತಿಯ ಆರೋಪಿಗಳ ಬಂಧನ ಮಾಡಲಾಗಿದೆ. ಇತ್ತಿಚೆಗೆ ರಮೇಶ ಗೇಮು ಲಮಾಣಿ ಹಾಗೂ ಇತರರು ಸೇರಿ ಸತೀಶ ಪ್ರೇಮಸಿಂಗ ರಾಠೋಡ ಈತನ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ, ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುತ್ತಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗಿದ್ದು, ಒಟ್ಟು 6 ಜನ ಆರೋಪಿತರನ್ನು ದಸ್ತಗೀರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದರಿ ಪ್ರಕರಣದಲ್ಲಿ 5ನೇ ಆರೋಪಿತನಾದ ಸಾಗರ @ ಸುರೇಶ ರಾಠೋಡ, ಸಾ: ಹಂಚನಾಳ ಎಲ್‌ಟಿ ನಂ: 1 ಈತನು ಕೊಲೆ ಪ್ರಕರಣದ ಪ್ರಮುಖ ಆರೋಪಿ ರಮೇಶ ಗೇಮು ಲಮಾಣಿ ಈತನಿಗೆ ಕೊಲೆ ಮಾಡಲು ಅಕ್ರಮ ಪಿಸ್ತೂಲ್‌ನ್ನು ಪೂರೈಕೆ ಮಾಡಿದ್ದನು. ಸದರಿ ಮಾಹಿತಿಯನ್ನು ಆಧರಿಸಿ, ವಿಜಯಪುರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈತನಿಂದ ಅಕ್ರಮವಾಗಿ ಪಿಸ್ತೂಲ್‌ಗಳನ್ನು ಪಡೆದವರ ಮೇಲೆ ದಾಳಿ ಮಾಡಿ ಒಟ್ಟು 10 ಕಂಟ್ರಿ ಪಿಸ್ತೂಲ್‌ಗಳು ಹಾಗೂ 24 ಸಜೀವ ಗುಂಡುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಕಾಶ ಮರ್ಕಿ ರಾಠೋಡ, ಸಾ: ಹಂಚಿನಾಳ ತಾಂಡಾ, ವಿಜಯಪುರ ಇವರಿಂದ ಪಿಸ್ತೂಲ್ : 01, ಸಜೀವ ಗುಂಡು: 03 ವಿಜಯಪುರ ಗ್ರಾಮೀಣ ಠಾಣೆ, ಅಶೋಕ ಪರಮು ಪಾಂಡ್ರೆ, ಸಾ: ಕರಾಡ ದೊಡ್ಡಿ, ಅರಕೇರಿ, ವಿಜಯಪುರ ಇವರಿಂದ ಪಿಸ್ತೂಲ್ : 01, ಸಜೀವ ಗುಂಡು : 02 ವಿಜಯಪುರ ಗ್ರಾಮೀಣ ಠಾಣೆ, ಸುಜಿತ ಸುಭಾಸ ರಾಠೋಡ, ಸಾ: ಕಡಕಿ ತಾಂಡಾ, ತಾ: ತುಳಜಾಪುರ ಜಿಲ್ಲಾ: ಸೊಲಾಪುರ, ಮಹಾರಾಷ್ಟ್ರ ಇವರಿಂದ ಪಿಸ್ತೂಲ್ : 01, ಸಜೀವ ಗುಂಡು: 01 ವಿಜಯಪುರ ಗ್ರಾಮೀಣ ಠಾಣೆ, ಸುಖದೇವ @ ಸುಖಿ ನರಸು ರಾಠೋಡ, ಸಾ: ಸಾಯಿ ಪಾರ್ಕ, ವಿಜಯಪುರ ಇವರಿಂದ ಪಿಸ್ತೂಲ್ : 01, ಸಜೀವ ಗುಂಡು : 05 ಜಲನಗರ ಠಾಣೆ, ಪ್ರಕಾಶ ಭೀಮಸಿಂಗ್ ರಾಠೋಡ, ಸಾ: ನಾಗಾವಿ ತಾಂಡಾ, ತಾ: ಸಿಂದಗಿ ಇವರಿಂದ ಪಿಸ್ತೂಲ್: 01, ಜೀವಂತ ಗುಂಡು: 01 ಸಿಂದಗಿ ಠಾಣೆ, ಗಣೇಶ ಶಿವರಾಮ ಶೆಟ್ಟಿ, ಸಾ: ಬಸವನ ಬಾಗೇವಾಡಿ, ಪಿಸ್ತೂಲ್: 01, ಸಜೀವ ಗುಂಡು: 04 ಬಸವನ ಬಾಗೇವಾಡಿ ಠಾಣೆ, ಚನ್ನಪ್ಪಾ ಮಲ್ಲಪ್ಪ ನಾಗನೂರ, ಸಾ: ನೂಲ್ವಿ ತಾ: ಹುಬ್ಬಳ್ಳಿ ಹಾಲಿ: ವಿಜಯಪುರ ಇವರಿಂದ ಪಿಸ್ತೂಲ್ : 01, ಸಜೀವ ಗುಂಡು : 04 ಆದರ್ಶನಗರ ಠಾಣೆ, ಸಂತೋಷ ಕಿಶನ್ ರಾಠೋಡ, ಸಾ: ಲೋಹಗಾಂವ ತಾಂಡಾ, ತಾ: ತಿಕೋಟಾ ಜಿ: ವಿಜಯಪುರ ಇವರಿಂದ ಪಿಸ್ತೂಲ್ : 01, ಸಜೀವ ಗುಂಡು : 04 ತಿಕೋಟಾ ಠಾಣೆ, ಜನಾರ್ಧನ ವಸಂತ ಪವಾರ, ಸಾ: ಐತವಾಡೆ, ಜಿಲ್ಲಾ: ಸಾಂಗ್ಲಿ, ಮಹಾರಾಷ್ಟ್ರ ಇವರಿಂದ ಪಿಸ್ತೂಲ್ : 01 ವಿಜಯಪುರ ಗ್ರಾಮೀಣ ಠಾಣೆ, ಸಾಗರ @ ಸುರೇಶ ರಾಠೋಡ, ಸಾ: ಹಂಚನಾಳ ಎಲ್‌ಟಿ ನಂ: 1 (ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 40/2025 ರಲ್ಲಿ ಈಗಾಗಲೇ ಜಪ್ತ ಪಡಿಸಿಕೊಳ್ಳಲಾಗಿದೆ) ಪಿಸ್ತೂಲ್: 01 ಹೀಗೆ ಒಟ್ಟು ಪಿಸ್ತೂಲ್‌ಗಳು : 10 ಹಾಗೂ ಸಜೀವ ಗುಂಡುಗಳು : 24 ವಶಕ್ಕೆ ಪಡೆದುಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದರು.