ವಿಜಯಪುರ: ದೇವರಹಿಪ್ಪರಗಿ ಮತಕ್ಷೇತ್ರದ ಬಿಜೆಪಿಯಲ್ಲಿ ಆಂತರಿಕ ಕಲಹ ಸ್ಫೋಟವಾಗಿದೆ. ದೇವರಹಿಪ್ಪರಗಿ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ ಹಾಗೂ
ಬಿಜೆಪಿ ಮಂಡಳ ಉಪಾಧ್ಯಕ್ಷ ನಡುವೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ರಸ್ತೆಯಲ್ಲಿ ಮಾತಿನ ಚಕಮಕಿ ನಡೆದಿದೆ. ಇನ್ನು ಶಾಸಕರ ಬೆಂಬಲಿಗರು ಹಾಗೂ ಉಪಾಧ್ಯಕ್ಷ ಮುತ್ತುರಾಜ ಹಾಲಿಹಾಳ ನಡುವೆ ವಾಗ್ವಾದ ನಂತರ ಕೈ ಕೈ ಮೀಲಾಯಿಸುವ ಹಂತಕ್ಕೂ ಹೋಗಿದೆ.
ಶಾಸಕ ಸೋಮನಗೌಡ ಸ್ಥಳಿಯ ಬಿಜೆಪಿ ಕಾರ್ಯಕರ್ತರನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ನಮ್ಮ ಕರೆಗಳನ್ನು ಸ್ವೀಕರಿಸಲ್ಲಾ ಎಂದು ಮುತ್ತುರಾಜ ಆರೋಪ ಮಾಡಿದ್ದಾನೆ. ಬಿಜೆಪಿ ಮಂಡಳ ಉಪಾಧ್ಯಕ್ಷ ಹಾಲಿಹಾಳನ ಈ ಮಾತಿಗೆ ಶಾಸಕರ ಬೆಂಬಲಿಗರು
ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ ಪರಸ್ಪರ ಮಾತಿನ ಚಕಮಕಿ, ವಾಗ್ವಾದ ನಡೆದಿದೆ. ನಂತರ ಪರಸ್ಥಿತಿಯನ್ನು ಸ್ಥಳದಲ್ಲಿದ್ದ ಮುಖಂಡರು ತಿಳಿಗೊಳಿಸಿ ಕಳೆಸಿದ್ದಾರೆ.