K1N ಡೆಸ್ಕ್: ಲವಂಗ ಪದಾರ್ಥ ಆರೋಗ್ಯಕ್ಕೆ ಒಳ್ಳೆಯದು. ಲವಂಗ ಅಡುಗೆಯ ಪರಿಮಳ ಹೆಚ್ಚಿಸುತ್ತದೆ. ಇನ್ನೂ ಲವಂಗದಲ್ಲಿ ಫೈಬರ್, ಪ್ರೋಟೀನ್, ಕ್ಯಾಲ್ಸಿಯಂ, ರಂಜಕ, ಮ್ಯಾಂಗನೀಸ್, ಸೇರಿದಂತೆ ಹಲವು ಪೋಷಕಾಂಶಗಳಿವೆ. ಆದ್ರೇ, ಲವಂಗ ಖಾಲಿ ಹೊಟ್ಟೆಯಲ್ಲಿ ಉಪಯೋಗಿಸಿದ್ರೇ ಏನೆಲ್ಲ ಲಾಭ ಇದೀಯಾ ಗೊತ್ತಾ..?
ಲವಂಗ ದಿನಂಪ್ರತಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಶೀತ, ಕಫ, ಕೆಮ್ಮುವಿನಂತಹ ಸಾಮಾನ್ಯ ಸಮಸ್ಯೆಗಳಿಂದ ಕಾಪಾಡುತ್ತದೆ. ಲವಂಗ ಸೇವಿಸುವುದರಿಂದ ಲಿವರ್ ಆರೋಗ್ಯವಾಗಿರುತ್ತದೆ. ಇದು ಲಿವರ್ ಅನ್ನು ಶ್ವಚ್ಛಗೊಳಿಸುತ್ತದೆ. ಅದರಲ್ಲಿರುವ ವಿಷ ಹೊರಹಾಕಲು ಉಪಯೋಗ ಆಗುತ್ತದೆ. ಲವಂಗ ಮೌತ್ ಫ್ರೆಶ್ನರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗವನ್ನು ಜಗಿಯುವುದರಿಂದ ಬಾಯಿಯ ಕೆಟ್ಟ ವಾಸನೆ ದೂರು ಆಗುತ್ತದೆ. ಅದಕ್ಕಾಗಿ ಲವಂಗವನ್ನು ಮಿತವಾಗಿ ಬಳಸಿ, ಆರೋಗ್ಯವಾಗಿ ಇರಬಹುದಾಗಿದೆ.