ಬೆಂಗಳೂರು: ಗೋಲ್ಗುಪ್ಪಾ, ಪಾನಿಪೂರಿ ಅಂದ್ರೇ ಯಾರಿಗೆ ತಾನೇ ಇಷ್ಟಾ ಇಲ್ಲ ಹೇಳಿ..? ಗರ್ಲ್ಫ್ರೆಂಡ್ ಜೊತೆ ಚಾಟ್ ಮಾಡ್ಕೊಂಡ್ ಚಾಟ್ ತಿನ್ತೀರಾ? ಇದು ಪಾನಿಪೂರಿ ಪ್ರಿಯರಿಗೆ ಶಾಕಿಂಗ್ ನ್ಯೂಸ್..
ಕಾಲರಾ ಕೇಸ್ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಪಾನಿಪೂರಿ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ನೇಪಾಳದ ರಾಜಧಾನಿ ಕಾಠ್ಮಂಡುವಿನಲ್ಲಿ ಪಾನಿಪೂರಿಯನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ಕಾಠ್ಮಂಡು ಕಣಿವೆಯ ಲಲಿತ್ ಪುರ್ ಮೆಟ್ರೋಪಾಲಿಟನ್ ಸಿಟಿಯಲ್ಲಿ ಕಾಲರಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.
ಪಾನಿಪೂರಿಯಲ್ಲಿ ಬಳಸಿದ ನೀರಿನಲ್ಲಿ ಕಾಲರಾ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ, ಜನದಟ್ಟಣೆಯ ಪ್ರದೇಶಗಳಲ್ಲಿ ಪಾನಿಪೂರಿ ಮಾರಾಟವನ್ನು ನಿಷೇಧ ಮಾಡಲಾಗಿದೆ. ಹಾಗಾಗಿ ರೋಗ ಹರಡುವುದನ್ನು ತಡೆಯಲು ಜನರು ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.