ಗೋವಾ: ನಟ ದಿಗಂತ್ಗೆ ಚಿತ್ರೀಕರಣದ ವೇಳೆ ಅಪಘಾತ ಆಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಗೋವಾದಲ್ಲಿ ನಟ ದಿಗಂತ ಆಪ್ತರು ಹಾಗೂ ಗೆಳೆಯರೊಡನೆ ಪ್ರವಾಸಕ್ಕೆ ತೆರಳಿದ್ದರು. ಟ್ರೆಕ್ಕಿಂಗ್ ಸೇರಿದಂತೆ ಇನ್ನಿತರೆ ಸಾಹಸ ಕ್ರೀಡೆಗಳಲ್ಲಿ ಅವರು ತೊಡಗಿಕೊಂಡಿದ್ದರು. ಸಾಹಸ ಕ್ರೀಡೆಗಳನ್ನು ಆಡುವ ವೇಳೆ ಅಚಾನಕ್ಕಾಗಿ ದಿಗಂತ್ರ ಕತ್ತಿಗೆ ತೀವ್ರ ಪೆಟ್ಟಾಗಿದೆ.
ಗೋವಾದ ಬೀಚ್ನಲ್ಲಿ ಬ್ಯಾಕ್ ಫ್ಲಿಪ್ ಮಾಡುವ ವೇಳೆ ಆಯತಪ್ಪಿ ತಲೆ ಕೆಳಗಾಗಿ ಬಿದ್ದ ಪರಿಣಾಮ ದಿಗಂತ್ ಕುತ್ತಿಗೆಗೆ ತೀವ್ರ ಪೆಟ್ಟಾಗಿದೆ ಎನ್ನಲಾಗುತ್ತಿದೆ. ದಿಗಂತ್ ನಟಿಸಿರುವ ‘ಗಾಳಿಪಟ 2’ ಸಿನಿಮಾ ಬಿಡುಗಡೆ ಆಗಬೇಕಿದೆ. ‘ಮಾರಿಗೋಲ್ಡ್’, ‘ಎಡಗೈ ಅಪಘಾತಕ್ಕೆ ಕಾರಣ’ ಇನ್ನೂ ಕೆಲವು ಸಿನಿಮಾಗಳಲ್ಲಿ ದಿಗಂತ್ ನಟಿಸುತ್ತಿದ್ದಾರೆ. ಆದರೆ ಈಗ ದಿಗಂತ್ ಅಪಘಾತಕ್ಕೆ ಗುರಿಯಾಗಿದ್ದು ಅವರ ಆರೋಗ್ಯದ ಬಗ್ಗೆ ಆತಂಕ ಮೂಡುತ್ತಿದೆ.