ಅಧಿಕಾರಿಗಳಿಂದ ದೀಪಾವಳಿ ಶುಭಾಶಯ ವಿನಿಮಯ*

Karnataka 1 News
ಅಧಿಕಾರಿಗಳಿಂದ ದೀಪಾವಳಿ ಶುಭಾಶಯ ವಿನಿಮಯ*
  • *ಅಧಿಕಾರಿಗಳಿಂದ ದೀಪಾವಳಿ ಶುಭಾಶಯ ವಿನಿಮಯ*

ವಿಜಯಪುರ : ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಚಿವರಾದ ಶಿವಾನಂದ ಪಾಟೀಲ ಅವರನ್ನು ಭೇಟಿಮಾಡಿದ ಬಸವನಬಾಗೇವಾಡಿ ಪೊಲೀಸ್ ಅಧಿಕಾರಿಗಳು ಹಬ್ಬದ ಶುಭಾಶಯ ಕೋರಿದರು.

ಮಂಗಳವಾರ ನಗರದಲ್ಲಿರುವ ಸಚಿವರ ಗೃಹ ಕಛೇರಿಯಲ್ಲಿ ಬಸವನಬಾಗೇವಾಡಿ ಉಪ ವಿಭಾಗದ ಡಿ‌.ಎಸ್.ಪಿ. ಬಲ್ಲಪ್ಪ ನಂದರೆಡ್ಡಿ ನೇತೃತ್ವದಲ್ಲಿ ಆಗಮಿಸಿದ್ದ ಬಸವನಬಾಗೇವಾಡಿ ವಿಧಾನಸಭೆ ವ್ಯಾಪ್ತಿಯ ಠಾಣೆಗಳ ಪೊಲೀಸ್ ಅಧಿಕಾರಿಗಳು ಹೂಗುಚ್ಚ ನೀಡಿ ಶುಭಾಶಯ ಕೋರಿದರು.

ಅಧಿಕಾರಿಗಳಿಂದ ದೀಪಾವಳಿ ಶುಭಾಶಯ ವಿನಿಮಯ*

ಹಬ್ಬ, ಸರ್ಕಾರಿ ರಜಾ ದಿನಗಳನ್ನೂ ಲೆಕ್ಕಿಸದೇ ಶಾಂತಿ, ಸುವ್ಯವಸ್ಥೆಗಾಗಿ ನಿರಂತರ ಕರ್ತವ್ಯ ನಿರ್ವಹಿಸುವ ಪೊಲೀಸರ ಸೇವೆ ಶ್ಲಾಘನೀಯ ಎಂದು ಬಣ್ಣಿಸಿದರು.

ಬಸವನಬಾಗೇವಾಡಿ ಡಿಎಸ್‌ಪಿ ಎನ್. ಬಲ್ಲಪ್ಪ ನಂದಗಾವಿ, ನಿಡಗುಂದಿ ಸಿಪಿಐ ಶರಣಗೌಡ ಬಸವನ ಬಾಗೇವಾಡಿ, ನಿಡಗುಂದಿ, ಮನಗೂಳಿ, ಆಲಮಟ್ಟಿ, ಪಿಎಸ್‌ಐಗಳಾದ ಪಿ.ದಶಾಲಾ, ಶ್ರೀಕಾಂತ ಕಾಂಬಳೆ, ಎಫ್.ಎಸ್. ಇಂಡಿಕರ ಸೇರಿದಂತೆ ವಿವಿಧ ಠಾಣೆಗಳ ಅಧಿಕಾರಿಗಳು, ಪೊಲೀಸ ಸಿಬ್ಬಂದಿ ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";