ವಿಜಯಪುರ: ಲಾಲ್ ಸಿಂಗ್ ಚಡ್ಡಾ ಚಿತ್ರ ವಿವಾದ ವಿಚಾರ ಹಿನ್ನಲೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಟ ಅಮೀರ್ ಖಾನ್ ವಿರುದ್ಧ ಕಿಡಿಕಾರಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ನಟ ಅಮೀರ ಖಾನ್ ನಾಗರ ಹಾವಿಗೆ ಹಾಲು ಹಾಕುವದು ಅವಮಾನ ಎನ್ನುತ್ತಾನೆ. ಹಾಗಾದ್ರೆ ಬಕ್ರೀದ ವೇಳೆ ಕುರಿ ಕೊಯ್ಯೋದು ಅದನ್ನೇಕೆ ಮೂಡ ನಂಬಿಕೆ ಅನ್ನಲ್ಲ ಎಂದರು. ಹಿಂದು ಧರ್ಮದ ವಿರುದ್ದ ಅವನ ಚಿತ್ರಗಳು ಬರುತ್ತವೆ. ಇನ್ನೂ ಶಾರುಕ ಖಾನ್, ಸಲ್ಮಾನ ಖಾನ್, ಸೈಫಲಿ ಖಾನ್, ಅಮೀರ್ ಖಾನ್ ಪಾಕಿಸ್ತಾನದ ಎಜೆಂಟರಾಗಿ ಕೆಲಸ ಮಾಡುತ್ತಾರೆ ಎಂದು ವಾಗ್ದಾಳಿ ಮಾಡಿದರು.
ದೇಶದ ಅನ್ಮ ತಿಂದು, ಈ ದೇಶದ ಅಭಿಮಾನಿಗಳು ಚಿತ್ರ ನೋಡಿ ಹಣ ಕೊಟ್ಟಿರುತ್ತಾರೆ. ಹಿಂದುತ್ವಕ್ಕೆ ಅಪಮಾನ ಮಾಡಿದ್ದಾರೆ ಅದಕ್ಕೆ ತಕ್ಕ ಶಾಸ್ತಿ ಆಗಬೇಕು ಎಂದರು.