ರಾಂಚಿ: ಪರೀಕ್ಷೆ (Exam) ಹಾಲ್ ಟಿಕೆಟ್ನಲ್ಲಿ ನಟಿ ಐಶ್ವರ್ಯ ರೈ ಫೋಟೋ ಹಾಕಿದ್ದು, ಇದನ್ನೂ ನೋಡಿದ ವಿದ್ಯಾರ್ಥಿನಿ ಕಂಗಾಲ ಆಗಿದ್ದಾಳೆ.
ವಿಶ್ವವಿದ್ಯಾಲಯದ ಎಡವಟ್ಟಿನಿಂದಾಗಿ ಹಾಲ್ ಟಿಕೆಟ್ನಲ್ಲಿ ವಿದ್ಯಾರ್ಥಿನಿ ಫೋಟೋ ಬದಲು ಮಾಜಿ ವಿಶ್ವಸುಂದರಿ, ನಟಿ ಐಶ್ವರ್ಯ ರೈ ಫೋಟೋ ಇರುವ ಘಟನೆ ಜಾರ್ಖಂಡ್ನ ಧನ್ಬಾದ್ನ ಬಿನೋದ್ ಬಿಹಾರಿ ಮಹ್ತೋ ಕೊಯಲಾಂಚಲ್ ವಿಶ್ವವಿದ್ಯಾಲಯದಲ್ಲಿ ಘಟನೆ ನಡೆದಿದೆ.
ವಿದ್ಯಾರ್ಥಿನಿಯು ಕುಲಪತಿ ಎಸ್.ಕೆ. ಬರನ್ವಾಲ್ ಬಳಿ ಪರಿಹಾರವನ್ನು ಕೇಳಿದ್ದಾಳೆ. ಆ ವೇಳೆ ಹಾಲ್ ಟಿಕೆಟ್ನ ಫೋಟೋ ಹಾಗೂ ಸಹಿಗಳನ್ನು ಅಪ್ಲೋಡ್ ಮಾಡುವುದು ವಿಶ್ವವಿದ್ಯಾಲಯದಿಂದ ಮಾಡುತ್ತಿಲ್ಲ. ಇದು ವಿಶ್ವವಿದ್ಯಾಲಯದ ಗೌರವಕ್ಕೆ ಧಕ್ಕೆ ತರುವ ಸಂಚಾಗಿದೆ ಎಂದಿದ್ದಾರೆ. ನಂತರ ಅಭ್ಯರ್ಥಿಯು ಫಾರ್ಮ್ನ್ನು ಭರ್ತಿ ಮಾಡಿರುವುದು ತಿಳಿದು ಬಂದಿದೆ. ಇದರ ಆಧಾರದ ಮೇಲೆ ಹಾಲ್ ಟಿಕೆಟ್ನ್ನು ಪಡೆದಳು.