ಆ್ಯಂಕರ್: ವಿಜಯಪುರ ಜಿಲ್ಲೆಯಲ್ಲಿ ಪಿಪಿಪಿ ಮೆಡಿಕಲ್ ಕಾಲೇಜು ವಿರೋಧಿಸಿ ಸಚಿವ ಎಂಬಿ ಪಾಟೀಲ ಮನೆಯ ಎದುರು ಹೋರಾಟ ನಡೆಯಿತು.

ಹೋರಾಟದ ವೇಳೆ ಬಸವನಬಾಗೇವಾಡಿ ತಾಲೂಕಿನ ಪಿ ಬಿ ಹುಣಶದಯಾಳ ಗ್ರಾಮದ ಶ್ರೀಮಠದ ಸಂಗನಬಸವೇಶ್ವರ ಸ್ವಾಮಿಜಿ ಮೊಬೈಲ್ ಕಸಿದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಅಲ್ಲದೇ, ಸ್ವಾಮಿಜಿಯನ್ನು ಪೊಲೀಸರು ದೂಡಾದಿದ್ದಾರೆ. ಅದಕ್ಕಾಗಿ ಸಿಟ್ಟಿಗೆದ್ದ ಸ್ವಾಮಿಜಿ ಪೊಲೀಸರಿಗೆ ಕಪಾಳ ಮೋಕ್ಷ ಮಾಡಿರುವ ಪ್ರಸಂಗ ನಡೆದಿದೆ. ಎದೆ ಹಿಡಿದು ಮೊಬೈಲ್ ಕಸಿದುಕೊಂಡಿದ್ದು, ನಾನೇನು ತಪ್ಪು ಮಾಡಿಲ್ಲ. ಸಚಿವ ಎಂ ಬಿ ಪಾಟೀಲರಿಗೆ ಕರೆ ಮಾಡ್ತೆನೆ ಅಂತಾ ಮೊಬೈಲ್ ಕಸಿಯಲು ಮುಂದಾದ್ರು ಎಂದು ಸ್ವಾಮಿಜೀ ಹೇಳಿದ್ದಾರೆ. ನಾವು ನಮ್ಮ ಮನೆಗೊಸ್ಕರ ಹೋರಾಟ ಮಾಡ್ತಿಲ್ಲ. ಬಡ ಮಕ್ಕಳಿಗಾಗಿ ಪಿಪಿಪಿ ಮೆಡಿಕಲ್ ಕಾಲೇಜು ವಿರುದ್ಧ ಹೋರಾಟ ಮಾಡ್ತಿದ್ದೇವೆ.

ಸ್ವಾಮಿಜಿಯನ್ನು ದೂಡಿ, ಉಳಿದ ಹೋರಾಟಗಾರರನ್ನು ವಶಕ್ಕೆ ಪಡೆದು ಪೊಲೀಸ್ ವ್ಯಾನ್ ಕರೆದುಕೊಂಡು ಠಾಣೆಗೆ ಹೋದರು.




