K1N ಡೆಸ್ಕ್: ಗ್ರಾಮವೊಂದನ್ನು ಕೇವಲ 2 ಕೋಟಿ ರೂಪಾಯಿಗೆ ಮಾರಾಟಕ್ಕಿಡಲಾಗಿದೆ.30 ವರ್ಷಗಳಿಂದ ಜನವಸತಿಯಿಲ್ಲದ ಸ್ಪಾನಿಷ್ ಗ್ರಾಮವನ್ನು ಪ್ರಸ್ತುತ 227,000 ಯೂರೋಗಳಿಗೆ ಅಂದರೆ ಸುಮಾರು 2,16,87,831 ಭಾರತೀಯ ರೂಪಾಯಿಗಳಿಗೆ ಮಾರಾಟಕ್ಕಿಡಲಾಗಿದೆ.
ಈಗ ಮಾರಾಟಕ್ಕೆ ಲಭ್ಯವಿರುವ ಸ್ಪೇನ್ನ ಈ ಗ್ರಾಮದ ಹೆಸರು ಸಾಲ್ಗೊಡಿ ಕ್ಯಾಸ್ಟ್ ಇದು ಪೋರ್ಚುಗಲ್ ಜೊತೆ ಗಡಿ ಹಂಚಿಕೊಂಡಿದೆ. ಝಮೊರಾ ಪ್ರಾಂತ್ಯದಲ್ಲಿದ್ದು, ಸ್ಪೇನ್ನ ಮ್ಯಾಡ್ರಿಡ್ನಿಂದ ಮೂರು ಗಂಟೆ ಪ್ರಯಾಣಿಸಿದರೆ ಈ ಪುಟ್ಟ ಗ್ರಾಮ ಸಿಗುತ್ತದೆ. ಈ ಗ್ರಾಮವೂ 44 ಮನೆಗಳು, ಹೋಟೆಲ್, ಚರ್ಚ್, ಶಾಲೆ,
ಪುರಸಭೆಯ ಈಜುಕೊಳ ಮತ್ತು ಸಿವಿಲ್ ಗಾರ್ಡ್
ಇರುವಂತಹ ಬ್ಯಾರಕ್ಗಳ ಕಟ್ಟಡವನ್ನು ಒಳಗೊಂಡಿದೆ.