ವಿಜಯಪುರ: ಆ ಗ್ರಾಮದಲ್ಲಿ ದಿನನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಸಾವು ನೋವುಗಳು ಆಗುತ್ತಿವೆ. ರೋಗ ರುಜಿನಗಳಿಂದ ಉಂಟಾಗುತ್ತಿರುವ ಸಾವು ನೋವಿಗೆ ಬೆಚ್ಚಿದ ಜನತೆ ಇದೀಗ್ ಗ್ರಾಮಸ್ಥರು ವಿಶಿಷ್ಟ ರೀತಿಯಲ್ಲಿ ದೇವರ ಪ್ರಾರ್ಥನೆ ಮಾಡುತ್ತಿದ್ದಾರೆ.
ವಿಜಯಪುರದ ಕಾಲೇಬಾಗ ಗ್ರಾಮದಲ್ಲಿನ ಗ್ರಾಮಸ್ಥರು ಬರೆಗಾಲಲ್ಲಿ ಓಡಾಡುತ್ತಾರೆ. ಬೈಕ್, ಸೈಕಲ್, ವಾಹನಗಳಿಗೆ ಬ್ರೇಕ್ ಹಾಕಿದ್ದಾರೆ.
ಹೌದು..! ಕಾಲೇಬಾಗ್ ಗ್ರಾಮಸ್ಥರು ಪುರೋಹಿತರ ಆಜ್ಞೆಯಂತೆ ಗ್ರಾಮದೇವತೆ ಜಟ್ಟಿಂಗೇಶ್ವರ ಹಾಗೂ ದುರ್ಗಾದೇವಿ ಹೆಸರಿನಲ್ಲಿ ವಾರ ಹಿಡಿದು ಪಾಲನೆ ಮಾಡುತ್ತಿದ್ದಾರೆ. ಇನ್ನು ಶೀಘ್ರದಲ್ಲೇ ಇಲ್ಲಿರುವ ಮರಗಮ್ಮ ದೇವಿ ಜಾತ್ರೆಯೂ ನಡೆಯಲಿದೆ. ತನ್ನಿಮಿತ್ತ ಐದು ವಾರ ಯಾರೂ ಚಪ್ಪಲಿ ಧರಿಸದೇ, ವಾಹನಗಳನ್ನು ಚಲಾಯಿಸದೇ ವೃತ ಆಚರಿಸುತ್ತಿದ್ದಾರೆ.
ಅದರಲ್ಲಿ ಎರಡು ವಾರವಂತೂ ಯಾರೂ ಈ ನಿಯಮ ಮುರಿಯುವಂತಿಲ್ಲವೆಂದು ಅರ್ಚಕರು ಹೇಳಿದ್ದರಿಂದ ಇಲ್ಲಿನ ಪ್ರತಿಯೊಬ್ಬರೂ ತಪ್ಪದೇ ಪಾಲಿಸುತ್ತಿರುವುದಾಗಿ ನಿವಾಸಿ ಪರಶುರಾಮ ಪೂಜಾರಿ ತಿಳಿಸುತ್ತಾರೆ. ಅಲ್ಲದೇ ಈ ಹಿಂದೆ ಅರ್ಚಕರು ನುಡಿದ ಎಲ್ಲವೂ ಸತ್ಯವಾಗಿದೆ ಎಂದರು.