ವಿಜಯಪುರ: ವಿಜಯಪುರ ಮೊದಲ ಮೇಯರ್ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ವಿಜಯಪುರ ಮೊದಲ ಮೇಯರ್ ಹಿಂದು ಆಗಬೇಕಾಗಿತ್ತು. ಆದ್ರೇ, ಮುಶ್ರಿಫ್ನಿಂದ 10 ಲಕ್ಷ ಹಣ ಪಡೆದುಕೊಂಡು 10 ಸದಸ್ಯರು ಗೈರು ಹಾಜರಿದ್ದರು ಎಂದು ವಾಗ್ದಾಳಿ ಮಾಡಿದರು. ಹಿಂದುತ್ವದ ವಿರುದ್ಧ ಕೆಸಲ ಮಾಡುವವರಿಗೆ ಬಿಜೆಪಿ ಟಿಕೆಟ್ ನೀಡಿಲ್ಲ.
ಇನ್ನು ವಿಜಯಪುರ ಅಭಿವೃದ್ಧಿ, ಹಿಂದುತ್ವದಿಂದ ಬಹಳ ಶಾಂತವಾಗಿ ಇದೆ. ಕೆಲವು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಬಂಡಾಯಗಾರರು ಒಂದಾಗಿದ್ದಾರೆ. ಆದ್ರೂ ಬಿಜೆಪಿ ಪಕ್ಷಕ್ಕೆ ಡ್ಯಾಮೇಜ್ ಆಗಲ್ಲ. ನಗರಾದ್ಯಂತ ಸಾವಿರಾರು ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ಆಗಿದ್ದಾವೆ ಎಂದರು.