K1N ಡೆಸ್ಕ್: ಭಾರತದಲ್ಲಿ ವಿವಿಧ ಮಸಾಲೆಗಳನ್ನು ಅಡುಗೆಗೆ ಬಳಸಲಾಗುತ್ತದೆ. ಮಸಾಲೆಗಳನ್ನು ಬಳಸಿ ಅಡುಗೆಯನ್ನು ರುಚಿಕರ ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಮಸಾಲೆಗಳನ್ನು ಬಳಸುವುದು ಕೆಲವೊಮ್ಮೆ ಜೀರ್ಣಕ್ರಿಯೆ ಹಾನಿಗೊಳಿಸುತ್ತದೆ. ಅಲ್ಲದೇ, ವೈದ್ಯರು ಮಸಾಲೆಯುಕ್ತ ಆಹಾರ ಸೇವಿಸದಂತೆ ಸಲಹೆ ನೀಡುತ್ತಾರೆ. ಆದ್ರೇ, ಮಸಾಲೆಗಳನ್ನು ಆಹಾರದಲ್ಲಿ ಬಳಸಲೇಬೇಕು. ಈ ಮಸಾಲೆಗಳನ್ನು ಬಳಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಜೀರಿಗೆಯಿಂದ ಆಹಾರದ ವಾಸನೇ ಹೆಚ್ಚುವುದರಿಂದ ರುಚಿಯೂ ಹೆಚ್ಚುತ್ತದೆ. ಜೀರಿಗೆಯು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಡುಗೆ ಮಾಡಿದರೂ ಅದರಲ್ಲಿ ಜೀರಿಗೆ ಸೇರಿಸುವುದನ್ನು ಮರೆಯಬೇಡಿ. ಓಮ ಕಾಳು ಹೊಟ್ಟೆಯ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ತೂಕವನ್ನು ಕಡಿಮೆ ಮಾಡಲು ಮತ್ತು ಶೀತದಿಂದ ಪರಿಹಾರಕ್ಕಾಗಿ ಓಮ ಕಾಳನ್ನು ಬಳಸಲಾಗುತ್ತದೆ. ಯಾವುದೇ ಮಸಾಲೆಯುಕ್ತ ಆಹಾರವನ್ನು ತಯಾರಿಸುತ್ತಿದ್ದರೆ, ಅದರಲ್ಲಿ ಒಮಕಾಳನ್ನು ಸೇರಿಸಿ. ಇಂಗನ್ನು ಬೇಳೆಯಿಂದ ಹಿಡಿದು, ಎಲ್ಲಾ ಅಡುಗೆಗಳಲ್ಲಿಯೂ ಬಳಸಲಾಗುತ್ತದೆ. ಹೊಟ್ಟೆ ನೋವು, ಗ್ಯಾಸ್, ಅಜೀರ್ಣದಂತಹ ಸಮಸ್ಯೆಗಳನ್ನು ತೊಡೆದು ಹಾಕಲು ಇಂಗು ಸಹಾಯ ಮಾಡುತ್ತದೆ. ಸೋಂಫನ್ನು ಅನೇಕ ರೀತಿಯ ಅಡುಗೆಯಲ್ಲಿ ಬಳಸಲಾಗುತ್ತದೆ. ಈ ಮಸಾಲೆ ಅಡುಗೆಯ ರುಚಿಯನ್ನು ಹೆಚ್ಚಿಸುವುದಲ್ಲದೆ ಜೀರ್ಣ ಕ್ರಿಯೆಯನ್ನು ಕೂಡಾ ಸುಧಾರಿಸುತ್ತದೆ. ಅದಕ್ಕಾಗಿ ಪ್ರತಿ ಅಡುಗೆಯಲ್ಲಿ ಇಂಗನ್ನು ಬಳಸುವಂತೆ ಸೂಚಿಸಲಾಗುತ್ತದೆ.