ವಿಜಯಪುರ: ಬರುವ ವಿಧಾನಸಭಾ ಚುನಾವಣೆಯ ಬಗ್ಗೆ ಬಿಜೆಪಿ ಯಾವುದೇ ಸರ್ವೇ ನಡೆಸಿಲ್ಲ ಎಂದು ವಿಜಯಪುರದಲ್ಲಿ ಮಾಧ್ಯಮವರು ಕೇಳಿದ ಪ್ರಶ್ನೆಗೆ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿದರು. ಬಿಜೆಪಿ ಸರ್ವೇ ನಡೆಸಿದೆ ಅನ್ನೋದು ಸುಳ್ಳು. ಕಾಂಗ್ರೆಸ್ ಸುಳ್ಳು ಹೇಳ್ತಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಜಯಭೇತಿ ಗ್ಯಾರಂಟಿ ಎಂದರು.
ಅಲ್ಲದೇ, ಬಿಜೆಪಿಗೆ 152 ಸೀಟ್ ಬಂದೆ ಬರುತ್ತದೆ. ಇನ್ನು ಕಾಂಗ್ರೆಸ್ ಜಗಳ ನಮಗೆ ಲಾಭ ಆಗಿದೆ. ಅವರವರಲ್ಲೆ ಜಗಳ ನಡೆಯುತ್ತಿದೆ. ಅವರ ಜಗಳ ನಮಗೆ ಲಾಭವಾಗಿ 100% ನಮ್ಮದೇ ಸರ್ಕಾರ ಬರುತ್ತದೆ ಎಂದರು.
ಇದಕ್ಕೂ ಮೊದಲು ವಿಜಯಪುರ ತಾಲೂಕಿನ ಬುರಣಾಪುರ ಗ್ರಾಮದಲ್ಲಿ ನಿರ್ಮಾಣವಾದ ಸರ್ಕಾರಿ ಗೋಶಾಲೆಯನ್ನು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಉದ್ಘಾಟಿಸಿದರು. ಇನ್ನೂ ಗೋಶಾಲೆಯಲ್ಲಿ ವಿಶೇಷ ಪೂಜೆಯನ್ನು ಸಚಿವ ಚವ್ಹಾಣ ಹಾಗೂ ಶಾಸಕ ಯತ್ನಾಳ ನಡೆಸಿದರು. ಪೂಜೆ ನೆರವೇರಿಸುವ ಸರ್ಕಾರಿ ಗೋಶಾಲೆಗೆ ಚಾಲನೆ ನೀಡಲಾಯಿತು. ಬಳಿಕ ಗೋಶಾಲೆಯ ಗೋವುಗಳ ವೀಕ್ಷಿಸಿ, ಅಧಿಕಾರಿಗಳಿಂದ ಗೋವುಗಳ ಆರೋಗ್ಯದ ಬಗ್ಗೆ ಮಾಹಿತಿಯನ್ನು ಸಚಿವ ಚವ್ಹಾಣ ಕಲೆ ಹಾಕಿದರು.