ವಿಜಯಪುರ: ವಯಸ್ಸಿಗೆ ಬಂದ ಮಕ್ಕಳು ಕಣ್ಣ ಮುಂದೆಯೇ ತೀರಿ ಹೋಗುವುದನ್ನು ಯಾವ ತಂದೆ ತಾಯಿಗೂ ಸಹಿಸಲಾಗದು. ವಿಜಯಪುರದ ಕುಟುಂಬವೊಂದಕ್ಕೂ ಹೀಗೆ ಆಗಿದೆ.
ಪ್ರಾಯಕ್ಕೆ ಬಂದ 20ರ ಹರೆಯದ ಪುತ್ರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಇದನ್ನು ಸಹಿಸಿಕೊಳ್ಳಲಾಗದ ಮನೆಯವರು ಅವನ ಸ್ಮರಣೆಗಾಗಿ ಗ್ರಾಮಕ್ಕೆ ಮಹಾದ್ವಾರ ನಿರ್ಮಿಸಿ ಕೊಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ಕಾಖಂಡಕಿ ಮತಕ್ಷೇತ್ರದ ಜಿಲ್ಲಾ ಪಂಚಾಯತ ಸದಸ್ಯೆ ದಾನಮ್ಮ ಅಂಗಡಿ ಹಾಗೂ ಉದ್ಯಮಿ ಗುರುಲಿಂಗಪ್ಪ ಅಂಗಡಿವರ ಪುತ್ರ ರಕ್ಷಿತ್ ಅಂಗಡಿ 16ಜೂನ್ 2020ರಲ್ಲಿ ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದ್ದರು. ಅಂಧನಾಗಿದ್ದರೂ ಕಣ್ಣಿದ್ದವರನ್ನೂ ಮೀರಿಸುವ ಮಹಾ ಚತುರನಾಗಿದ್ದ.
ರಕ್ಷಿತ್ ಎಸ್ಎಸ್ ಎಲ್ಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದ ರಕ್ಷಿತ್, ಭಾರತ ಸರ್ಕಾರ ನಡೆಸುವ ಎನ್ಟಿಎಸ್ಇಯಲ್ಲಿ ಪ್ರಥಮ ಸ್ಥಾನ ಪಡೆದಿದ್ದನು. ಅದಕ್ಕಾಗಿ ಶ್ರೀ ಸಿದ್ದಲಿಂಗೇಶ್ವರ ದಿವ್ಯ ಸಾನಿಧ್ಯದಲ್ಲಿ ನಾಳೆ ಮುಂಜಾನೆ 10ಕ್ಕೆ ಕಾರ್ಯಕ್ರಮ ಉದ್ಘಾಟನೆ ಆಗಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.