K1N ಡೆಸ್ಕ್: ಉಪ್ಪಿನಕಾಯಿ ಎಂದಾಕ್ಷಣ ಬಾಯಲ್ಲಿ ನೀರು ಬರವುದು ಸರ್ವೇಸಾಮಾನ್ಯ. ಊಟದೊಂದಿಗೆ ಉಪ್ಪಿನಕಾಯಿ ಇರಲೇ ಬೇಕು. ಅಂದಾಗ ಮಾತ್ರ ಊಟ ಮಹತ್ವ ಬರುತ್ತದೆ. ಹೌದು..! ಉಪ್ಪಿನಕಾಯಿಗಾಗಿ ಮಾವು ಅಥವಾ ಇತರ ವಸ್ತುಗಳನ್ನು ನೆನೆ ಹಾಕಿರುವ ನೀರಿನಲ್ಲಿ ಸಾಕಷ್ಟು ಉತ್ತಮ ಅಂಶಗಳಿವೆ. ಆ ನೀರು ಉಪ್ಪಿನಕಾಯಿಗೆ ಬಳಕೆಯಾದ ಬಳಿಕವೂ ಉಳಿಯಿತ್ತದೆ. ಅದನ್ನು ಎಸೆಯದೆ ತೆಗೆದಿಡಿ. ಅದರ ಜ್ಯೂಸ್ ತಯಾರಿಸಿ ಕುಡಿಯಿರಿ. ಆಂಟಿ ಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ಹೇರಳವಾಗಿರುವ ಇದರ ಸೇವನೆಯಿಂದ ಸ್ನಾಯು ಸೆಳೆತ ದೂರವಾಗುತ್ತದೆ. ಇನ್ನು ಜಿಮ್ನಲ್ಲಿ ಬೆವರು ಹರಿಸಿದ ಬಳಿಕ ದೇಹದಿಂದ ಸಾಕಷ್ಟು ನೀರು ಸೋರಿಕೆ ಆಗುತ್ತದೆ. ಇದನ್ನು ತಡೆಯಲು ಈ ಜ್ಯೂಸ್ ಸೇವಿಸುವುದು ಉತ್ತಮ. ಉಪ್ಪಿನಕಾಯಿಯಲ್ಲಿರುವ ವಿನೆಗರ್ ಕರುಳಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ದೇಹದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಅಧಿಕ ತೂಕ ಮತ್ತು ಬೊಜ್ಜು ಹೊಂದಿರುವವರಿಗೆ ತೂಕ ಇಳಿಸಲು ಸಹಾಯ ಆಗುತ್ತದೆ.
ಅಧಿಕ ರಕ್ತದೊತ್ತಡ ಅಥವಾ ಸಂಧಿವಾತ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆದು ಉಪ್ಪಿನಕಾಯಿ ಹಾಗೂ ಜ್ಯೂಸ್ ಕುಡಿಯಬಹುದು.