K1N ಡೆಸ್ಕ್: ಶುಂಠಿಯಲ್ಲಿ ಅತ್ಯುತ್ತಮ ಆಂಟಿ ಬಯೋಟಿಕ್ ಗಳಿವೆ. ಇದರ ಸೇವನೆಯಿಂದ ಹಲವು ಆರೋಗ್ಯದ ಸಮಸ್ಯೆಗಳಿಗೆ ರಾಮ ಬಾಣ ಆಗಿದೆ. ಆದರೆ ಇದನ್ನು ಸೇವಿಸುವುದು ಹೇಗೆ ಗೊತ್ತಾ..? ದಿನನಿತ್ಯ ಬೆಳಿಗ್ಗೆ ಕುಡಿಯುವ ಚಹಾಗೆ ಒಂದು ಚಮಚ ಶುಂಠಿ ರಸ ಸೇರಿಸಿ ಕುಡಿಯಬಹುದು. ರುಚಿಯಲ್ಲಿ ಕೊಂಚ ಬದಲಾವಣೆಯಾದರೂ ನಿಮ್ಮ ದೇಹವನ್ನು ದಿನವಿಡೀ ಚೈತನ್ಯಶೀಲರಾಗಿ ಇರುವಂತೆ ಮಾಡುವ ಶಕ್ತಿ ಇದೆ. ಚಹಾ ಕುದಿಯುವ ವೇಳೆ ಎಲೆಯೊಂದಿಗೆ ಒಂದಿಂಚು ಗಾತ್ರದ ಶುಂಠಿಯನ್ನು ಜಜ್ಜಿ ಹಾಕಿ ಕುದಿಸಿದ ಬಳಿಕ ಸೋಸಿ ಕುಡಿಯಿರಿ. ಇದರಿಂದ ಹಲವು ಔಷಧೀಯ ಗುಣಗಳ ಲಾಭ ನಿಮ್ಮದಾಗುತ್ತದೆ. ಶೀತ ಕಫದಂತ ಸಮಸ್ಯೆಗಳೂ ದೂರವಾಗುತ್ತವೆ. ಅಲ್ಲದೇ, ಬ್ರೆಡ್ ನೊಂದಿಗೆ ಶುಂಠಿಯೂ ನಿಮ್ಮ ದೇಹ ಸೇರಿ ಜೀರ್ಣಕ್ರಿಯೆಯನ್ನು ಸುಲಭವಾಗಿಸುತ್ತದೆ. ದೇಹಕ್ಕೆ ಶಕ್ತಿ ನೀಡುತ್ತದೆ. ಹಣ್ಣುಗಳ ಜ್ಯೂಸ್ ತಯಾರಿಸುವಾಗ ಶುಂಠಿ ರಸ ಸೇರಿಸಿ, ಕೊತ್ತಂಬರಿ ಕಷಾಯ ತಯಾರಿಸಿದರೂ ಶುಂಠಿ ಸೇರಿಸಿ ಕುದಿಸಿ. ಒಣಶುಂಠಿ ಪುಡಿಯನ್ನು ಆಹಾರದಲ್ಲಿ ಬಳಸಿ ನೋಡಿ ನಿಮ್ಮ ಹಲವು ಸಮಸ್ಯೆಗಳಿಗೆ ಇದು ರಾಮಬಾಣವಾಗುವುದು ಖಚಿತ.