K1N ಡೆಸ್ಕ್: ಭಾರತೀಯರ ಮನೆಯ ಅಡುಗೆಗಳಲ್ಲಿ ತುಪ್ಪ ಬಳಸುವುದು ಸರ್ವೇಸಾಮಾನ್ಯ. ಪ್ರತಿ ಆಹಾರ ತಯಾರು ಮಾಡುವಾಗಲೂ ತುಪ್ಪ ಬಳಕೆ ಮಾಡಲಾಗುತ್ತದೆ. ಹಾಗೇನೆ ಎಣ್ಣೆ ಅಥವಾ ಬೇರೆ ಕೊಬ್ಬಿನಾಮ್ಲಗಳಿಗೆ ಹೋಲಿಸಿದ್ರೇ ತುಪ್ಪ ಆರೋಗ್ಯಕ್ಕೆ ಒಳ್ಳೆಯದು. ಬೆಳ್ಳುಳ್ಳಿಯನ್ನು ತುಪ್ಪದೊಂದಿಗೆ ಬೆರೆಸಿ ತಿಂದರೆ ಜ್ವರಕ್ಕೆ ಪರಿಣಾಮಕಾರಿ ಔಷಧಿಯಾಗುತ್ತಂತೆ. ಸಾಂಪ್ರದಾಯಿಕ ಔಷಧಗಳನ್ನು ನಂಬುವವರಿಗೆ ಈ ಔಷಧಿ ಉಪಯುಕ್ತವಾಗಿದೆ. ಆದ್ರೇ, ಜ್ವರ ಹಲವಾರು ದಿನಗಳವರೆಗೂ ಇದ್ರೇ ನೀವು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ತ್ರಿಫಲ ಮಿಶ್ರಣವನ್ನು ತುಪ್ಪದೊಂದಿಗೆ ಸೇರಿಸಿ ತಿಂದರೆ ತುಂಬಾನೇ ಒಳ್ಳೆಯದು. ರಕ್ತಹೀನತೆ ಸಮಸ್ಯೆಯನ್ನು ಕಡಿಮೆ ಮಾಡೋದಕ್ಕೆ ಇದು ಪರಿಣಾಮಕಾರಿ ಔಷಧಿಯಾಗಿದೆ. ಬೆಳಗ್ಗಿನ ಉಪಹಾರದ ಜೊತೆಗೆ ಒಂದೆರಡು ಚಮಚ ತುಪ್ಪವನ್ನು ಸೇವನೆ ಮಾಡಬಹುದು. ಎಣ್ಣೆ ಅಥವಾ ಬೆಣ್ಣೆಯ ಬದಲಾಗಿ ತುಪ್ಪವನ್ನು ಸೇವನೆ ಮಾಡಿದ್ರೆ ತುಂಬಾನೇ ಒಳ್ಳೆಯದು. ಬ್ರೆಡ್ ಟೋಸ್ಟ್ ಮಾಡುವಾಗ ಅಥವಾ ಬೇರೆ ಯಾವುದಾದರೂ ಬ್ರೇಕ್ ಫಾಸ್ಟ್ ತಯಾರು ಮಾಡುವಾಗ ತುಪ್ಪವನ್ನು ಸೇರಿಸಿಕೊಂಡರೆ ಉತ್ತಮ. ಎಣ್ಣೆಯಲ್ಲಿ ಕರಿದ ಪದಾರ್ಥಗಳು ನಮಗೆ ತಿನ್ನೋದಕ್ಕೆ ತುಂಬಾನೇ ರುಚಿಯಾಗಿರುತ್ತದೆ. ಆದರೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಒಗ್ಗರಣೆಗೆ ಎಣ್ಣೆಯ ಬದಲು ತುಪ್ಪವನ್ನು ಬಳಕೆ ಮಾಡಿದ್ರೆ ಉತ್ತಮ. ನಾವು ತಿನ್ನುವ ಆಹಾರದಲ್ಲಿ ತುಪ್ಪವನ್ನು ಬಳಸೋದ್ರಿಂದ ಹಾನಿಕಾರಕ ಸಂಯುಕ್ತಗಳ ಬಿಡುಗಡೆಯನ್ನು ತಡೆಯುತ್ತದೆ. ತುಪ್ಪ ಆರೋಗ್ಯಕ್ಕೆ ಒಳ್ಳೆಯದೇ ಆದರೆ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಅನ್ನೋದು ನಮಗೆ ಗೊತ್ತಿರಬೇಕು. ಅತಿಯಾಗಿ ತುಪ್ಪ ಸೇವಿಸಿದರೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಚ್ಚರ ಎಚ್ಚರ.