ವಿಜಯಪುರ: ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲರಿಂದ ಇದೀಗ ಪ್ಯಾಕೇಜ್ ರಾಜಕಾರಣ ಶುರುವಾಗಿದೆ. ಇನ್ನು ಮುಂದಿನ ಆರು ತಿಂಗಳ ಕಾಲ ಮತದಾರರೆಲ್ಲರೂ ಇವರಿಗೆ ಕುಟುಂಬ ಸದಸ್ಯರೇ ಎಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಹೊನವಾಡ ಲೇವಡಿ ಮಾಡಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎಂ.ಬಿ. ಪಾಟೀಲರಿಗೆ ಶ್ರೀಮಂತರೇ ಬೇಕು. ಬಡವರು ಬೇಡವಾಗಿದೆ. ಇವರಿಗೆ ತಮ್ಮ ತಮ್ಮ, ಕುಟುಂಬ ಮಾತ್ರ ರಾಜಕೀಯ ಮಾಡಬೇಕು. ಬೇರೆ ಯಾರೂ ರಾಜಕೀಯವಾಗಿ ಮುಂದುವರಿಯಬಾರದು ಎಂದು ಆರೋಪಿಸಿದರು.